ಕೇಂದ್ರ ಪೌರತ್ವ ಮಸೂದೆ ಅಂಗೀಕರಿಸಿದರೆ ಅಸ್ಸಾಂನಲ್ಲಿ ಬಿಜೆಪಿ ಜತೆಗಿನ ಮೈತ್ರಿ ಅಂತ್ಯ: ಅಸ್ಸೋಂ ಗಣ ಪರಿಷದ್ ಬೆದರಿಕೆ

Update: 2018-08-11 17:50 GMT

ಹೊಸದಿಲ್ಲಿ, ಆ. 11: ಕೇಂದ್ರ ಪೌರತ್ವ (ತಿದ್ದುಪಡಿ) ಕಾಯ್ದೆ ಅಂಗೀಕರಿಸಿದರೆ, ರಾಜ್ಯದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯಿಂದ ಹೊರಬರುವುದಾಗಿ ಅಸ್ಸೋಂ ಗಣ ಪರಿಷದ್ ನಾಯಕ ಹಾಗೂ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ಲಾ ಮಹಾಂತ ಬೆದರಿಕೆ ಒಡ್ಡಿದ್ದಾರೆ.

ವಿವಾದಾತ್ಮಕ ಪೌರತ್ವ ಮಸೂದೆಯನ್ನು ಕೇಂದ್ರ ಅಂಗೀಕರಿಸಿದರೆ, ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರಕಾರದಿಂದ ತಾನು ಹೊರಬರುವುದಾಗಿ ಮಹಾಂತ ಅವರು ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಸರಕಾರ ಈ ಮಸೂದೆ ಅಂಗೀಕರಿಸಿದರೆ, ಅಸ್ಸಾಮಿ ಜನರು ತಮ್ಮ ನೆಲದಲ್ಲೇ ಅಲ್ಪಸಂಖ್ಯಾತರಾಗುವರು. ಇದು ಅಸ್ಸಾಂ ಜನರಿಗೆ ಅಪಾಯಕಾರಿ ವಿಚಾರ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಈ ಮಸೂದೆ ಅಂಗೀಕಾರವಾದರೆ ರಾಷ್ಟ್ರೀಯ ಪೌರತ್ವ ರಿಜಿಸ್ಟರ್‌ನ ಪಟ್ಟಿಯಿಂದ ಕೈಬಿಡಲಾದ ಹಿಂದೂ ವಲಸಿಗರು ತನ್ನಿಂದತಾನೆ ಭಾರತದ ಪೌರತ್ವ ಪಡೆಯುವರು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News