ಪಾತ್ರೆ ಉಲ್ಟಾ ಹಾಕಿ ಗಟಾರದಿಂದ ಗ್ಯಾಸ್!

Update: 2018-08-13 13:10 GMT

ಹೊಸದಿಲ್ಲಿ,ಆ.13: ಪ್ರಧಾನಿ ನರೇಂದ್ರ ಮೋದಿ ವಿಶ್ವ ಜೈವಿಕ ಇಂಧನ ದಿನಾಚರಣೆ (ಆಗಸ್ಟ್ 10)ಯಂದು ಮಾಡಿದ ಭಾಷಣದ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೋದಿ ಹೇಳಿಕೆಗೆ ಸೋಷಿಯಲ್ ಮೀಡಿಯಾ ಬೇಸ್ತುಬಿದ್ದಿದೆ. @ರಿಯಲ್‍ಹಿಸ್ಟರಿಪಿಕ್ ಎಂಬ ಹ್ಯಾಂಡಲ್‍ನಿಂದ ಇದನ್ನು ಟ್ವೀಟ್ ಮಾಡಲಾಗಿದೆ.

"ಕಿಸಿ ಚೋಟೆ ಸೆ ನಗರ್ ಮೇ ನಾಲೆ ಕೇ ಪಾಸ್ ಕೋಯಿ ಚಾಯ್ ಕಾ ತೆಹ್ಲಾ ಲೇಕರ ಕೆ ಖಂಡಾ ರಹ್ತಾ ಥಾ ಔರ್ ಚಾಯ್ ಬನಾಕರ್ ಕೆ ಬೇಚ್ತಾ ಥಾ. ಉಸ್ನೇ ಏಕ್ ಚೋಟೆ ಸೇ ಬಾರ್ಟನ್ ಕೊ ಉಲ್ಟಾ ಕರ್ಕೆ ಚೆಡ್ ಕರ್‍ಕೆ ಏಕ್ ಪೈ ಡಾಲ್ ದಿ. ಔರ್ ಜೋ ಗಟ್ಟರ್ ಸೆ ಗ್ಯಾಸ್ ನಿಕಾಲ್ತಾ ಥಾ ವಹ್ ಪೈಪ್‍ಲೈನ್ ಸೆ ಉಸ್ಕೆ ಚಾಯ್ ಕೆ ಥಾಲೆ ಮೈನ್ ಲೆ ಲಿಯಾ. ಔರ್ ವಹ್ ಚಾಯ್ ಬನಾನೆ ಕೆ ಲಿಯೇ ಉಸ್ಸಿ ಗ್ಯಾಸ್ ಕಾ ಉಪಯೋಗ್ ಕರ್ಕೆ ಚಾಯ್ ಬನಾಥಾ ಥಾ."
(ಒಬ್ಬ ವ್ಯಕ್ತಿ ಗಟಾರ ಗ್ಯಾಸ್‍ನಿಂದ ಚಹಾ ಮಾಡಿದ್ದಾಗಿ ಮೋದಿ ಉಲ್ಲೇಖಿಸಿದ್ದಾರೆ. "ಒಂದು ನಗರದಲ್ಲಿ ಗಟಾರದ ಸಮೀಪ ಒಬ್ಬ ವ್ಯಕ್ತಿ ಚಹಾ ಮಾಡುತ್ತಿದ್ದ. ಚರಂಡಿಯ ಅನಿಲವನ್ನು ಏಕೆ ಬಳಸಬಾರದು ಎಂಬ ಯೋಚನೆ ಆತನಿಗೆ ಬಂತು. ಆತ ತಕ್ಷಣ ಪಾತ್ರೆಯನ್ನು ಉಲ್ಟಾಹಾಕಿ ಪೈಪ್‍ಗೆ ಸಂಪರ್ಕ ಕೊಟ್ಟ. ಬಳಿಕ ಚರಂಡಿಯಲ್ಲಿ ಉತ್ಪತ್ತಿಯಾಗುವ ಅನಿಲ ನೇರವಾಗಿ ಪೈಪ್ ಮೂಲಕ ಸ್ವೌಗೆ ಬಂತು. ಅದನ್ನು ಬಳಸಿಕೊಂಡು ಚಹಾ ಮಾಡಿದ ಎಂದು ಪತ್ರಿಕೆಯಲ್ಲಿ ನಾನು ಓದಿದ್ದೇನೆ) ಎಂಬ ಪ್ರಧಾನಿ ಹೇಳಿಕೆ ತಮಾಷೆಯ ವಸ್ತುವಾಗಿದೆ.

ವೈಜ್ಞಾನಿಕವಾಗಿ ಚರಂಡಿ ನೀರನ್ನು ಗ್ಯಾಸ್ ಅಥವಾ ಜೈವಿಕ ಅನಿಲವಾಗಿ ಪರಿವರ್ತಿಸಿ ಸ್ಟೌಗಳಿಗೆ ಅದನ್ನು ಬಳಸುವ ಬಗ್ಗೆ ಬಹುಶಃ ಮೋದಿ ಮಾತನಾಡಿರಬೇಕು. 2016ರಿಂದೀಚೆಗೆ ಅದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಆದರೆ ಇದಕ್ಕೆ ಸೂಕ್ತ ಕೈಗಾರಿಕಾ ಘಟಕ ಬೇಕು. ಮೋದಿ ಹೇಳಿದಂತೆ ಪಾತ್ರೆಯನ್ನು ಉಲ್ಟಾ ಹಾಕಿ ಬಳಸಲು ಸಾಧ್ಯವಿಲ್ಲ ಎನ್ನುವುದು ವಾಸ್ತವ.

ರಿಯಾ ಕುಲಕರ್ಣಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು, "...ಗಟಾರದಿಂದ ಗ್ಯಾಸ್ ಸಂಶೋಧನೆಗೆ ಮೋದಿಗೆ ನೋಬೆಲ್" ಎಂದು ಲೇವಡಿ ಮಾಡಿದ್ದಾರೆ. "ಮೇಕ್ ಇನ್ ಇಂಡಿಯಾದಲ್ಲಿ ಹೊಸ ಕಾರು ಸಿದ್ಧಪಡಿಸಲಾಗಿದ್ದು, ಇದು ಪೆಟ್ರೋಲ್, ಡೀಸೆಲ್ ಬದಲು ಮಿಥೇನ್ ಅಥವಾ ಗಾಳಿಯಿಂದ ಓಡುತ್ತದೆ. ಅದೂ ಚಹಾ ಮತ್ತು ಪಕೋಡಾದಿಂದ ಉತ್ಪತ್ತಿಯಾಗುವ ಅನಿಲ" ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ.

"ನಿನ್ನೆ ರಾತ್ರಿ ನಾನು ಬಹಳಷ್ಟು ಕಡಲೆ ತಿಂದಿದ್ದೆ. ಇಂದು ಬೆಳಿಗ್ಗೆ ಆ ಗ್ಯಾಸ್ ಬಳಸಿ ಚಹಾ ಮಾಡಿದೆ" ಎಂದು ಅತುಲ್ ಖತ್ರಿ ಎಂಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News