ತಂದೆ ಕರುಣಾನಿಧಿ ಆಪ್ತರು ನನ್ನ ಜೊತೆ ಇದ್ದಾರೆ: ಎಂ.ಕೆ. ಅಳಗಿರಿ

Update: 2018-08-13 15:55 GMT

ಹೊಸದಿಲ್ಲಿ, ಆ. 13: ನನ್ನ ತಂದೆ ಕರುಣಾನಿಧಿ ಅವರ ನಿಜವಾದ ಸಂಬಂಧಿಕರು ನನಗೆ ಬೆಂಬಲ ನೀಡಲಿದ್ದಾರೆ ಎಂದು ಡಿಎಂಕೆಯಿಂದ 2004ರಲ್ಲಿ ಉಚ್ಛಾಟನೆಗೊಂಡ ಎಂ.ಕೆ. ಅಳಗಿರಿ ಹೇಳಿದ್ದಾರೆ. ‘‘ನನ್ನ ತಂದೆಯ ನಿಜವಾದ ಸಂಬಂಧಿಕರು ನನ್ನೊಂದಿಗೆ ಇದ್ದಾರೆ. ತಮಿಳುನಾಡಿನ ಎಲ್ಲ ಬೆಂಬಲಿಗರು ನನ್ನೊಂದಿಗೆ ಇದ್ದಾರೆ. ಅವರು ನನ್ನನ್ನು ಮಾತ್ರ ಬೆಂಬಲಿಸುತ್ತಾರೆ. ಎಲ್ಲದಕ್ಕೂ ಸಮಯ ಮಾತ್ರ ಉತ್ತರ ಹೇಳಬಲ್ಲುದು. ಈಗ ಇದನ್ನು ನಾನು ಹೇಳಲು ಬಯಸುತ್ತೇನೆ.’’ ಎಂದು ಅಳಗಿರಿ ತಿಳಿಸಿದ್ದಾರೆ. 

ಚೆನ್ನೈಯಲ್ಲಿರುವ ಡಿಎಂಕೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕರುಣಾನಿಧಿ ಅವರ ಇನ್ನೋರ್ವ ಪುತ್ರ ಎಂ.ಕೆ. ಸ್ಟಾಲಿನ್ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ಅಳಗಿರಿ ಹಾಗೂ ಸ್ಟಾಲಿನ್ ನಡುವಿನ ಬಿಕ್ಕಟ್ಟು ಉದ್ಭವಿಸಿದ ಬಳಿಕ ಅಳಗಿರಿ ಅವರನ್ನು 2004ರಲ್ಲಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಸ್ಟಾಲಿನ್ ಅವರನ್ನು ಅಲ್ಲದೆ ಕರುಣಾನಿಧಿ ಅವರ ಪುತ್ರಿ ಹಾಗೂ ರಾಜ್ಯಸಭೆ ಸಂಸದೆ ಎಂ.ಕೆ. ಕನ್ನಿಮೋಳ್ ಅವರನ್ನು ಕೂಡ ಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿ ಅಥವಾ ಕೋಶಾಧಿಕಾರಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News