ಕೇರಳ ಹಜ್ ಸಮಿತಿಗೆ ಮಹಿಳಾ ಸದಸ್ಯೆ ನೇಮಕ

Update: 2018-08-13 16:03 GMT

ತಿರುವನಂತಪುರಂ, ಆ.13: ಕೇರಳದ ಸಿಪಿಐ(ಎಂ) ನೇತೃತ್ವದ ಸರಕಾರವು ರಾಜ್ಯ ಹಜ್ ಸಮಿತಿಯನ್ನು ಪುನರಾರಚಿಸಿದ್ದು , ಸಮಿತಿಗೆ ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯೆಯೊಬ್ಬರನ್ನು ನೇಮಿಸುವ ಮೂಲಕ ಸ್ವಾಗತಾರ್ಹ ಹೆಜ್ಜೆ ಇರಿಸಿದೆ. ಇಂಡಿಯನ್ ನ್ಯಾಷನಲ್ ಲೀಗ್(ಐಎನ್‌ಎಲ್) ನಾಯಕಿ, ಕಾಞಂಗಾಡ್ ಪುರಸಭೆಯ ಉಪಾಧ್ಯಕ್ಷೆ ಸುಲೈಕರನ್ನು ಮುಂದಿನ ಎರಡು ವರ್ಷದ ಅವಧಿಗೆ ಹಜ್ ಸಮಿತಿಯ ಸದಸ್ಯೆಯನ್ನಾಗಿ ನೇಮಿಸಿ ಕೇರಳ ಸರಕಾರ ಆದೇಶ ಹೊರಡಿಸಿದೆ. ತನ್ನನ್ನು ಸಮಿತಿ ಸದಸ್ಯೆಯನ್ನಾಗಿ ನೇಮಿಸಿರುವುದಕ್ಕೆ ಕೇರಳ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಸುಲೈಕ, ಪವಿತ್ರ ಮಕ್ಕಾ ಯಾತ್ರೆ ಸಂದರ್ಭ ಮಹಿಳಾ ಯಾತ್ರಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಿತಿಯ ಸಭೆಯಲ್ಲಿ ಪ್ರಸ್ತಾವಿಸಲು ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಹಜ್ ಸಮಿತಿಯ ರೀತಿಯಲ್ಲೇ ಇನ್ನಿತರ ಸಂಸ್ಥೆಗಳಲ್ಲೂ ಮಹಿಳೆಯರ ಪ್ರಾತಿನಿಧ್ಯ ಖಾತರಿಪಡಿಸುವುದು ಇಂದಿನ ಅಗತ್ಯವಾಗಿದೆ ಎಂದಿದ್ದಾರೆ.

ಸುಲೈಕಾ ಸೇರಿದಂತೆ ಹೊಸ ಸಮಿತಿಯಲ್ಲಿ 16 ಸದಸ್ಯರಿದ್ದಾರೆ. ಇವರಲ್ಲಿ ಇಬ್ಬರು ಪದನಿಮಿತ್ತ ಸದಸ್ಯರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News