ಮೂಡಿಗೆರೆ: ಶಿಥಿಲಗೊಂಡಿದ್ದ ಸರಕಾರಿ ಶಾಲೆ ಕುಸಿತ

Update: 2018-08-14 10:36 GMT

ಮೂಡಿಗೆರೆ, ಆ.14: ತಾಲೂಕಿನ ಚಿನ್ನಿಗ ಗ್ರಾಮದಲ್ಲಿದ್ದ ಕಳೆದ 57 ವರ್ಷದ ಹಿಂದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳು ಮಂಗಳವಾರ ಸಂಪೂರ್ಣ ಕುಸಿದಿದೆ.

ಕಳೆದ ಕೆಲ ದಿನಗಳಿಂದ ನಿರಂತರ ಮಳೆಗೆ ಸಂಪೂರ್ಣ ಶಿಥಿಲಾವಸ್ಥೆಗೊಂಡು ಎರಡು ಕೋಣೆಗಳು ಗೋಡೆಗಳ ಸಹಿತ, ಚಾವಣಿ ನೆಲಕ್ಕಚ್ಚಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿಯಂತಹ ಘಟನೆ ಸಂಭವಿಸಿಲ್ಲ.

ಹಲವು ದಿನಗಳಿಂದ ಈ ಶಾಲೆ ಶಿಥಿಲಾವಸ್ಥೆಯಲ್ಲಿ ಕುಸಿಯುವ ಹಂತದಲ್ಲಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದೊಂದು ವಾರದಿಂದ ತರಗತಿಯನ್ನು ಬೇರೆ ಕೊಠಡಿಗಳಲ್ಲಿ ನಡೆಸಲಾಗುತಿತ್ತು. ಅಲ್ಲದೆ ಎರಡು ದಿನಗಳಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಕುಸಿದಿರುವ ಕೊಠಡಿಗಳಲ್ಲಿ 7ನೇ ತರಗತಿ ನಡೆಸಲಾಗುತ್ತಿತ್ತು. ಶಾಲೆಯಲ್ಲಿ ಒಟ್ಟು 115 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ ಶಾಲೆಯನ್ನು ದುರಸ್ತಿಗೊಳಿಸಲು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದಾಗ ರೂ.4 ಲಕ್ಷ ಅನುದಾನ ಮೀಸಲಿಡಲಾಗುವುದೆಂದು ಮಾಹಿತಿ ನೀಡಿದ್ದರು.

ಕುಸಿದಿರುವ ಕೊಠಡಿಯ ಹೆಂಚು ಮತ್ತು ಹಾನಿಗೀಡಾಗಿರುವ ಪೀಠೋಪಕರಣಗಳನ್ನು ಬೇರೆಡೆ ಸಂಗ್ರಹಿಸಿ ಆ ಸ್ಥಳವನ್ನು ಸಂಪೂರ್ಣ ನೆಲಸಮಗೊಳಸಲಾಗುವುದು. ಅಲ್ಲದೆ ಈಗಾಗಲೇ ಶಾಲೆಯಲ್ಲಿ 6 ಕೊಠಡಿಗಳಿದ್ದು, ಕಡಿಮೆ ಸಂಖ್ಯೆಯ 1 ತರಗತಿಯನ್ನು ಸಧ್ಯದ ಪರಿಸ್ಥಿತಿಯಲ್ಲಿ ಮುಖ್ಯಶಿಕ್ಷಕರ ಕೊಠಡಿಗೆ ಸ್ಥಳಾಂತರಿಸಲಾಗುವುದು. ಮರು ನಿರ್ಮಾಣಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

-ತಾರಾನಾಥ್, ಬಿಇಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News