ಸ್ವಾತಂತ್ರ್ಯವೀರರ ರಕ್ತತರ್ಪಣದ ವೀರಭೂಮಿ ವಿದುರಾಶ್ವತ್ಥ

Update: 2018-08-15 08:47 GMT

ಹುತಾತ್ಮರಾದ ವೀರರು

ಇಡಗೂರು ಭೀಮಯ್ಯ, ಚೌಳೂರು ನರಸಪ್ಪ, ಗಜ್ಜನಗಾರಿ ನರಸಪ್ಪ, ಹನುಮಂತಪ್ಪ, ಕಾಡಗೊಂಡನಹಳ್ಳಿ ಮಲ್ಲಯ್ಯ, ಅಶ್ವತ್ಥನಾರಾಯಣ ಶೆಟ್ಟಿ, ವೆಂಕಟಗಿರಿಯಪ್ಪ, ನರಸಪ್ಪ, ಮರಳೂರು ಗೌರಮ್ಮ ( ಒಟ್ಟು 32 ಹೋರಾಟಗಾರರ ಬಲಿ, ಆದರೆ 9 ಹೆಸರು ಮಾತ್ರ ಇಲ್ಲಿ ಲಭ್ಯ).

ಗೌರಿಬಿದನೂರು: 1938ರ ಏಪ್ರಿಲ್ 25ರಲ್ಲಿ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿದ್ದ ಧ್ವಜ ಸತ್ಯಾಗ್ರಹದ ರಣ ಕಹಳೆ ಮೊಳಗಿತ್ತು. ಸಾವಿರಾರು ಮಂದಿ ದೇಶ ಪ್ರೇಮಿಗಳ ಜನಸಾಗರವೇ ಅಲ್ಲಿಗೆ ಹರಿದುಬಂದಿತ್ತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪೊಲೀಸರ ಬಂದೂಕುಗಳು ಝಳಪಿಸುತ್ತಿದ್ದರೂ ಕ್ಯಾರೇ ಎನ್ನದೆ ಜನರು ವಿದುರಾಶ್ವತ್ಥದತ್ತ ವೀರ ಹೆಜ್ಜೆ ಹಾಕುತ್ತ ಧ್ವಜ ಹಾರಿಸುತ್ತಿದ್ದರು. ಈ ವೇಳೆ ಕೆಲ ಮುಖಂಡರು ಭಾಷಣ ಮಾಡುತ್ತಿದ್ದರು. ಈ ವೇಳೆ ಮಾಜಿಸ್ಟ್ರೇಟರು ಜನರನ್ನು ಚದುರಿಸಲು ಲಾಠಿ ಚಾರ್ಜ್‌ಗೆ ಆದೇಶಿಸಿದಾಗ ಜನ ರೊಚ್ಚಿಗೆದ್ದು, ಎಳನೀರಿನ ಚಿಪ್ಪು, ಕಲ್ಲು, ಇಟ್ಟಿಗೆಗಳನ್ನು ಪೊಲೀಸರತ್ತ ಎಸೆದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಎ.ಎಸ್.ಖಲೀಲ್ ತಮ್ಮ ರಿವಾಲ್ವಾರ್‌ನಿಂದ ಗುಂಡು ಹಾರಿಸಿದ್ದೇ ತಡ ವ್ಯಕ್ತಿಯೊಬ್ಬರು ನೆಲಕ್ಕುರುಳಿದರು. ಬಳಿಕ ರೈಫಲ್ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ 32 ಮಂದಿ ಬಲಿದಾನವಾಗಿ 48 ಮಂದಿ ಗಾಯಗೊಂಡರು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲ್ಲಿ ಗಮನ ಸೆಳೆದ ಈ ಹತ್ಯಾಕಾಂಡ ಮೈಸೂರು ಪ್ರಾಂತದಲ್ಲಿ ಬ್ರಿಟಿಷರ ವಿರುದ್ಧ ಹೋರಾಟದ ಕಿಚ್ಚು ಹೆಚ್ಚಿಸಿತು. ವಿದುರಾಶ್ವತ್ಥ ಹತ್ಯಾಕಾಂಡ ಸ್ವಾತಂತ್ರ್ಯ ಚಳವಳಿಯ ಬಿಸಿಯನ್ನು ದೇಶೀಯ ಸಂಸ್ಥಾನಗಳ ಕಡೆಗೆ ಹರಿಸಿತು. ವಿದುರಾಶ್ವತ್ಥ ಘಟನೆ ನಡೆದು ಇಂದಿಗೆ 76 ವರ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News