23 ವರ್ಷಗಳ ಜೈಲುವಾಸದ ಬಳಿಕ ಪೆರೋಲ್‌ನಲ್ಲಿ ಬಿಡುಗಡೆಗೊಂಡ 92ರ ವಯೋವೃದ್ಧ ಡಾ.ಹಬೀಬ್ ಖಾನ್

Update: 2018-08-15 16:28 GMT

ಲಕ್ನೋ,ಆ.15: ವಯೋವೃದ್ಧ ಡಾ.ಹಬೀಬ್ ಅಹ್ಮದ್ ಖಾನ್(92) ಅವರು 23 ವರ್ಷಗಳ ಬಳಿಕ ಕೊನೆಗೂ ರಾಜಸ್ಥಾನದ ಜೈಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡು ಉತ್ತರ ಪ್ರದೇಶದ ರಾಯಬರೇಲಿಯಲ್ಲಿರುವ ತನ್ನ ಮನೆಯನ್ನು ತಲುಪಿದ್ದಾರೆ. ರಾಜಸ್ಥಾನ ಉಚ್ಚ ನ್ಯಾಯಾಲಯವು ಇದೇ ಮೊದಲ ಬಾರಿಗೆ ಅವರಿಗೆ 20 ದಿನಗಳ ಪೆರೋಲ್ ಮಂಜೂರು ಮಾಡಿದೆ.

1993ರ ಸರಣಿ ರೈಲು ಸ್ಫೋಟಗಳಿಗೆ ಸಂಬಂಧಿಸಿದಂತೆ ಹಬೀಬ್‌ರನ್ನು 1994ರಲ್ಲಿ ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. 2004ರಲ್ಲಿ ಇತರ ಇಬ್ಬರೊಂದಿಗೆ ಅವರನ್ನು ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿತ್ತು. ಈ 23 ವರ್ಷಗಳಲ್ಲಿ ಹಬೀಬ್ ಹಲವಾರು ಬಾರಿ ಪೆರೋಲ್‌ಗಾಗಿ ಪ್ರಯತ್ನಿಸಿದ್ದರು. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರ ಅವರ ಮನವಿಗಳನ್ನು ತಿರಸ್ಕರಿಸಿದ್ದವು. ಕೊನೆಗೂ ಆ.2ರಂದು ಅವರ ಪೆರೋಲ್ ಅರ್ಜಿಯನ್ನು ರಾಜಸ್ಥಾನ ಉಚ್ಚ ನ್ಯಾಯಾಲಯವು ಪುರಸ್ಕರಿಸಿದ್ದು,ಕಳೆದ ವಾರ ಜೈಲಿನಿಂದ ಬಿಡುಗಡೆಗೊಂಡು ರಾಯಬರೇಲಿಯ ಕಹರೋಂಕಾ ಅಡ್ಡಾದಲ್ಲಿರುವ ಮನೆಗೆ ಮರಳಿದ್ದಾರೆ.

 ಹಬೀಬ್‌ರ ಸಹಆರೋಪಿಯಾಗಿದ್ದ ಅಷ್ಫಾಕ್ ಖಾನ್‌ಗೆ ಮೇ 2017ರಲ್ಲಿ ಸರ್ವೋಚ್ಚ ನ್ಯಾಯಾಲಯವು 21 ದಿನಗಳ ಪೆರೋಲ್ ಮಂಜೂರು ಮಾಡಿತ್ತು. ಅವರನ್ನೂ ಇದೇ ಪ್ರಕರಣದಲ್ಲಿ 2004ರಲ್ಲಿ ಬಂಧಿಸಲಾಗಿತ್ತು ಮತ್ತು ಮೊದಲ ಬಾರಿ ಪೆರೋಲ್ ಪಡೆದಿದ್ದರು. ಇನ್ನೋರ್ವ ಸಹಆರೋಪಿ ಮುಹಮ್ಮದ್ ಅಮೀನ್(80)ಗೆ ಈ ವರ್ಷದ ಆ.6ರಂದು ಸರ್ವೋಚ್ಚ ನ್ಯಾಯಾಲಯವು 21 ದಿನಗಳ ಪೆರೋಲ್ ಮಂಜೂರು ಮಾಡಿದೆ. 25 ವರ್ಷಗಳ ಕಾಲ ಜೈಲಿನಲ್ಲಿದ್ದ ಅಮೀನ್ ತನ್ನ ಅನಾರೋಗ್ಯಪೀಡಿತ ಪತ್ನಿಯನ್ನು ನೋಡಲೆಂದು ಪೆರೋಲ್‌ಗಾಗಿ ಮಾಡಿಕೊಂಡಿದ್ದ ಮನವಿಯನ್ನು ರಾಜಸ್ಥಾನ ಸರಕಾರವು ತಿರಸ್ಕರಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

ಭಯೋತ್ಪಾದನೆ ಆರೋಪದಲ್ಲಿ ಈ ಮೂವರಿಗೂ ಟಾಡಾ ಕಾಯ್ದೆಯಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.

ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಡಾ.ಝಫರುಲ್ ಇಸ್ಲಾಂ ಖಾನ್ ಅವರು ಮಾನವೀಯ ನೆಲೆಯಲ್ಲಿ ಹಬೀಬ್‌ರನ್ನು ಬಿಡುಗಡೆ ಮಾಡುವಂತೆ ರಾಷ್ಟ್ರಪತಿ,ಪ್ರಧಾನಿ,ರಾಜ್ಯಪಾಲರು,ರಾಜಸ್ಥಾನ ಮುಖ್ಯಮಂತ್ರಿ ಮತ್ತು ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಲಿಖಿತ ಮನವಿಗಳನ್ನು ಸಲ್ಲಿಸಿದ್ದರು.

ಡಾ.ಹಬೀಬ್ ಖಾನ್ ಅವರಿಗೆ ಈಗ 92 ವರ್ಷಗಳು. ಕೊನೆಯ ದಿನಗಳನ್ನೆಣಿಸುತ್ತಿರುವ ಅವರ ಪತ್ನಿ ಕೈಸರ್ ಜಹಾನ್ ತಾನು ಸಾಯುವ ಮುನ್ನ ಪತಿಯನ್ನು ನೋಡಲು ಆಶಿಸುತ್ತಿದ್ದಾರೆ. ಡಾ.ಹಬೀಬ್ ಅವರು ಭಯೋತ್ಪಾದಕನೋರ್ವನಿಗೆ ಹಣಕಾಸು ಒದಗಿಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ಈ ಆರೋಪವನ್ನು ನಿರಾಕರಿಸಿದ್ದ ಅವರು,ತನಗೆ ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು ಎಂದು ಮನವಿ ಪತ್ರದಲ್ಲಿ ವಿವರಿಸಿದ್ದ ಡಾ.ಝಫರುಲ್ ಇಸ್ಲಾಂ ಖಾನ್ ಅವರು,ಈ ವಯೋವೃದ್ಧ ವ್ಯಕ್ತಿ ತನ್ನ ಕೊನೆಯ ದಿನಗಳನ್ನು ತನ್ನ ಕುಟುಂಬದೊಂದಿಗೆ ಕಳೆಯುವಂತಾಗಲು ಅವರನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಬಹುದಾಗಿದೆ. ತಾನು ಖುದ್ದಾಗಿ ಅವರಿಗೆ ಜಾಮೀನು ನಿಲ್ಲಲು ಸಿದ್ಧನಿದ್ದೇನೆ ಎಂದು ಕೋರಿಕೊಂಡಿದ್ದರು.

ಕಳೆದ 2-3 ದಶಕಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕರು ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಈ ಸ್ಫೋಟಗಳ ಬೆನ್ನಿಗೇ ನೂರಾರು ಜನರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಆದರೆ ಸಾಕಷ್ಟು ಸಂಖ್ಯೆಯ ಜನರು ಹಲವಾರು ವರ್ಷಗಳನ್ನು ಜೈಲುಗಳಲ್ಲಿ ಕಳೆದ ಬಳಿಕ ಸಾಕ್ಸ್ಯಧಾರಗಳ ಕೊರತೆಯಿಂದ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News