ತಂದೆಯ ನಿಧನಾನಂತರ ನಾನೇ ಡಿಎಂಕೆ ಮುಖ್ಯಸ್ಥ:ಸ್ಟಾಲಿನ್

Update: 2018-08-15 16:38 GMT

ಚೆನ್ನೈ,ಆ.15: ಪಕ್ಷಾಧ್ಯಕ್ಷ ಹಾಗೂ ತನ್ನ ತಂದೆ ಎಂ.ಕರುಣಾನಿಧಿಯವರ ನಿಧನದ ಬಳಿಕ ಪಕ್ಷದ ನಾಯಕತ್ವದ ಹೊಣೆ ತನ್ನದೇ ಆಗಿದೆ ಎಂದು ಡಿಎಂಕೆಯ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಹೇಳಿದ್ದಾರೆ.

‘ನಮ್ಮ ಪಕ್ಷದ ನಾಯಕರು ನಮ್ಮನ್ನು ಅಗಲಿದ್ದಾರೆ ಮತ್ತು ಕಾರ್ಯಕರ್ತರು ನನ್ನೊಂದಿಗಿದ್ದಾರೆ ಎಂಬ ಖಚಿತ ಆಶಯದೊಂದಿಗೆ ಪಕ್ಷದ ಅಧಿಕಾರವನ್ನು ನಾನು ವಹಿಸಿಕೊಂಡಿದ್ದೇನೆ ’ ಎಂದು ಪಕ್ಷದ ಕಾರ್ಯಕರ್ತರಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಕರುಣಾನಿಧಿಯವರ ನಿಜವಾದ ಬೆಂಬಲಿಗರು ತನ್ನೊಂದಿಗಿದ್ದಾರೆ ಎಂದು ಸೋಮವಾರ ಹೇಳಿದ್ದ ಹಿರಿಯ ಸೋದರ ಹಾಗೂ ಉಚ್ಚಾಟಿತ ಡಿಎಂಕೆ ನಾಯಕ ಎಂ.ಕೆ.ಅಳಗಿರಿಯವರಿಗೆ ಸ್ಟಾಲಿನ್‌ರ ಹೇಳಿಕೆ ಉತ್ತರವಾಗಿರುವಂತಿದೆ.

ಪಕ್ಷದೊಳಗೆ ಅಥವಾ ಹೊರಗೆ ಎತ್ತಲಾಗುವ ಯಾವುದೇ ವಿವಾದಗಳಿಂದ ತಾನು ಧೃತಿಗೆಡುವುದಿಲ್ಲ. ಕರುಣಾನಿಧಿಯವರು ತನ್ನನ್ನು ತರಬೇತುಗೊಳಿಸಿದ್ದಾರೆ. ನಿಮ್ಮೆಲ್ಲರ ನೆರವಿನಿಂದ ಇಂತಹ ವಿವಾದಗಳನ್ನು ತಾನು ಜಯಿಸುತ್ತೇನೆ ಎಂದೂ ಸ್ಟಾಲಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News