ಉತ್ತರಪ್ರದೇಶದಲ್ಲಿ ಪ್ರಾಸ್ಟಿಕ್ ನಿಷೇಧ

Update: 2018-08-15 18:26 GMT

ಲಕ್ನೋ, ಆ. 15: ಪ್ಲಾಸ್ಟಿಕ್, ಥರ್ಮೋಕಾಲ್ ಉತ್ಪಾದನೆ, ದಾಸ್ತಾನು ಹಾಗೂ ಸಾಗಾಟವನ್ನು ನಿಷೇಧಿಸಿ ಉತ್ತರಪ್ರದೇಶ ಸರಕಾರ ಬುಧವಾರ ಆದೇಶ ಹೊರಡಿಸಿದೆ. 72ನೇ ಸ್ವಾತಂತ್ರ ದಿನಾಚರಣೆಯ ಈ ನಿರ್ಧಾರ ಘೋಷಿಸಲಾಗಿದ್ದು, ಬಳಸಿ ಬಿಸಾಡುವ ಕಪ್, ತಟ್ಟೆ, ಚಮಚ ಫೋರ್ಕ್ಸ್ ಹಾಗೂ ಗ್ಲಾಸ್‌ಗಳ ಮೇಲೆ ನಿಷೇಧ ವಿಧಿಸಲಾಗಿದೆ. ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಸರಕಾರ ಜುಲೈಯಲ್ಲಿ ಆರಂಭಿಸಿದ ಉಪಕ್ರಮದ ಎರಡನೇ ಹಂತ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 50 ಮೈಕ್ರಾನ್‌ಗಿಂತ ಕಡಿಮೆ ಇರುವ ಪಾಲಿಥಿನ್ ಬ್ಯಾಗ್‌ಗಳ ಬಳಕೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜುಲೈ 15ರಂದು ನಿಷೇಧಿ ವಿಧಿಸಿದ್ದಾರೆ. ಜೈವಿಕವಾಗಿ ಕೊಳೆಯದ ಎಲ್ಲ ಪಾಲಿಥಿನ್‌ಗಳ ಮೇಲೆ ಮೂರನೆ ಹಾಗೂ ಅಂತಿಮ ನಿಷೇಧವನ್ನು ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಂದು ಹೇರಲಿದೆ. ನಿಷೇಧ ಜಾರಿಗೆ ತರಲು ನಗರಾಡಳಿತ, ಜಿಲ್ಲಾ ಅಧಿಕಾರಿಗಳು, ಸಂಬಂಧಿತ ಇಲಾಖೆಗಳಿಗೆ ಸರಕಾರ ನಿರ್ದೇಶಿಸಿದೆ ಎಂದು ಪ್ರಾಥಮಿಕ ಕಾರ್ಯದರ್ಶಿ (ನಗರಾಭಿವೃದ್ಧಿ) ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News