ಉಳಿತೊಟ್ಟು ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Update: 2018-08-15 18:51 GMT

ನೆಲ್ಯಾಡಿ, ಆ. 15: ಇಲ್ಲಿನ ಸಮೀಪದ ಉಳಿತೊಟ್ಟು ಬಿಲಾಲ್ ಜುಮಾ ಮಸೀದಿ, ಅಲ್-ಇಖ್ವಾನ್ ಕಮಿಟಿ, ಎಸ್.ಬಿ.ಎಸ್. ಇದರ ಸಂಯುಕ್ತ ಆಶ್ರಯದಲ್ಲಿ 72ನೇ ಸ್ವಾತಂತ್ರಯೋತ್ಸವವನ್ನು ಆಚರಿಸಲಾಯಿತು.

ಮಸೀದಿ ಅಧ್ಯಕ್ಷ  ಹಾಜಿ ಯೂಸುಫ್ ಬಿಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ಮಾಡಿದರು. ಖತೀಬ್ ಉಸ್ತಾದ್ ಅಬ್ದುಲ್ ಮಜೀದ್ ಅಹ್ಸನಿ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಅಲ್-ಇಖ್ವಾನ್ ಕಮಿಟಿಯ ವತಿಯಿಂದ ಕಳೆದ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಜಮಾಅತಿಗೆ ಒಳಪಟ್ಟ ಇಬ್ಬರು ವಿಧ್ಯಾರ್ಥಿನಿಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೂರುಲ್ ಹುದಾ ಮದ್ರಸದ ವಿಧ್ಯಾರ್ಥಿಗಳಾದ ಅಯಾನ್, ಶಹೀರ್, ತೌಫೀಕ್, ಜುನೈದ್ ಸ್ವಾತಂತ್ರ್ಯದ ಕುರಿತು ಭಾಷಣ ಮಾಡಿದರು.

ವೇದಿಕೆಯಲ್ಲಿ ಸದರ್ ಉಸ್ತಾದ್ ಅಝೀಝ್ ಮುಸ್ಲಿಯಾರ್, ಅಲ್-ಇಖ್ವಾನ್ ಕಮಿಟಿಯ ಅಧ್ಯಕ್ಷರು ಹಾಗು ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯರು ಆದ ಶೇಕ್ ಶಬ್ಬೀರ್ ಸಾಹೇಬ್, ಜಮಾಅತ್ ಮಾಜಿ ಅಧ್ಯಕ್ಷರುಗಳಾದ ಹಾಜಿ ಯು. ಉಮರಬ್ಬ, ಹಾಜಿ.ಯು.ಎಚ್. ಹಸನಬ್ಬ ರವರು ಉಪಸ್ಥಿತರಿದ್ದರು.

ಅಲ್-ಇಖ್ವಾನ್ ಕಮಿಟಿಯ ಕಾರ್ಯದರ್ಶಿ ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News