ಮಂಜನಾಡಿ: ಅಲ್ ಮದೀನಾದಲ್ಲಿ ಸ್ವಾತಂತ್ರೋತ್ಸವ

Update: 2018-08-15 19:24 GMT

ಮಂಜನಾಡಿ, ಆ. 15 :  ಅಲ್ ಮದೀನ ವಿದ್ಯಾಸಂಸ್ಥೆ ಮಂಜನಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಬಿಶಾರತುಲ್ ಮದೀನ ರೂಪಿಸಿರುವ 25 ನೂತನ ಪದ್ಧತಿಗಳಲ್ಲಿ ಒಂದಾದ ಸಮಾಜದ ಲೋಗೋ ಪ್ರಕಾಶನ ಮತ್ತು ಸಂಸ್ಥೆಗೆ ಪೋಡಿಯಂ ಸಮರ್ಪಣೆಯನ್ನು ಶರಫುಲ್ ಉಲಮಾ ನೆರವೇರಿಸಿದರು. ಸಂಸ್ಥೆಯ ನಿರ್ದೇಶಕರಾದ ಮುಹಮ್ಮದ್ ಕುಞ್ಞಿ ಅಂಜದಿ ಉದ್ಘಾಟನೆಗೈದರು .ಸಂಸ್ಥೆಯ ಮುದರ್ರಿಸರು,  ಎಸ್ ಎಸ್ ಎಫ್ ಉಳ್ಳಾಲ ಡಿವಿಶನ್ ಅಧ್ಯಕ್ಷರಾಗಿರುವ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.

ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ದ. ಕ. ಜಿಲ್ಲಾ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಎನ್.ಎಸ್.ಕರೀಮ್ ಹಾಜಿ ಉಪಸ್ಥಿತರಿದ್ದರು.

ದಅವಾ  ಕಾಲೇಜು ಪ್ರಾಂಶುಪಾಲರಾದ ಸಲಾಮ್ ಅಹ್ಸನಿ  ಸಂದೇಶ ಭಾಷಣ ಮಾಡಿದರು. ಇಕ್ಬಾಲ್ ಮರ್ಝೂಖಿ ಸಖಾಫಿ 25 ನೂತನ ಯೋಜನೆಯ ಕರುಡನ್ನು ಮಂಡಿಸಿದರು. ಸ್ವಾತಂತ್ರ್ಯೋತ್ಸವದ ಪೂರ್ವ ಭಾವಿಯಾಗಿ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜಯಶಾಲಿಯಾದ ಪ್ರತಿಭೆಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಬಿಶಾರತುಲ್ ಮದೀನದ ಅಧ್ಯಕ್ಷ ಅನೀಸ್ ಸ್ವಾಗತಗೈದರೆ, ನೌಫಲ್ ಮಲಾರ್  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News