ಉಪ್ಪಿನಂಗಡಿ: ಎರಡನೇ ಸಲ ಸಂಗಮವಾದ ಕುಮಾರಧಾರ-ನೇತ್ರಾವತಿ

Update: 2018-08-16 08:48 GMT

ಉಪ್ಪಿನಂಗಡಿ, ಆ.16: ದಕ್ಷಿಣ ಕನ್ನಡ ಜೀವನದಿಗಳಾದ ನೇತ್ರಾವತಿ, ಕುಮಾರಧಾರ ನದಿಗಳು ಗುರುವಾರ ಬೆಳಗ್ಗೆ ಈ ವರ್ಷ ಎರಡನೇ ಬಾರಿ ಸಂಗಮವಾಗಿದೆ.

ಈ ಎರಡು ನದಿಗಳು ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಲಭ್ಯ ಮಾಹಿತಿಯಂತೆ ಈ ವರ್ಷ ಮೊದಲ ಬಾರಿಗೆ ಎರಡನೇ ಸಲ ಸಂಗಮವಾಗಿವೆ. ಆದರೆ ದೇವಾಲಯದಲ್ಲಿ ಗಂಗಾಪೂಜೆ ಇನ್ನಷ್ಟೇ ನೆರವೇರಬೇಕಾಗಿದ್ದು, ದೇವಾಲಯದ ಅಂಗಣದ ಕೊಡಿಮರದ ಬಳಿ ನೀರು ಪ್ರವೇಶಿಸುವುದನ್ನು ಕಾಯಲಾಗುತ್ತಿದೆ.

ಕುಮಾರಧಾರ-ನೇತ್ರಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಉಭಯ ನದಿಗಳಲ್ಲಿ ನೀರು ಏರುತ್ತಲೇ ಇದ್ದು, ಪೇಟೆಗೆ ನೀರು ನುಗ್ಗಿ ಅಪಾಯವುಂಟಾಗುವ ಭೀತಿ ಎದುರಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News