ಟರ್ಕಿಯಲ್ಲಿ 15 ಬಿಲಿಯ ಡಾಲರ್ ಹೂಡಿಕೆಗೆ ಮುಂದಾದ ಕತರ್

Update: 2018-08-16 16:15 GMT

ಅಂಕಾರ (ಟರ್ಕಿ), ಆ. 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಧಿಕ್ಕರಿಸಿದ ಕತರ್ ಬುಧವಾರ ಟರ್ಕಿಯ ಆರ್ಥಿಕ ಮಾರುಕಟ್ಟೆಗಳು ಮತ್ತು ಬ್ಯಾಂಕ್‌ಗಳಿಗೆ 15 ಬಿಲಿಯ ಡಾಲರ್ (ಸುಮಾರು 1.05 ಲಕ್ಷ ಕೋಟಿ ರೂಪಾಯಿ) ಸುರಿದಿದೆ.

ಕರೆನ್ಸಿ ಲಿರಾದ ಮೌಲ್ಯ ಕುಸಿತ ಹಾಗೂ ಮತ್ತು ಅಮೆರಿಕ ವಿರುದ್ಧದ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಟರ್ಕಿಯನ್ನು ಪಾರು ಮಾಡಲು ಕತರ್ ಮುಂದಾಗಿದೆ.

ಟರ್ಕಿ ರಾಜಧಾನಿ ಅಂಕಾರದಲ್ಲಿ ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಾಮದ್ ಅಲ್-ತಾನಿ ಮತ್ತು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ನಡುವೆ ಮಾತುಕತೆ ನಡೆದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

ಈ ವರ್ಷ ಟರ್ಕಿ ಕರೆನ್ಸಿಯ ವೌಲ್ಯ ಡಾಲರ್ ಎದುರು ಸುಮಾರು 40 ಶೇಕಡದಷ್ಟು ಕುಸಿದಿದೆ.

ಕಳೆದ ವಾರ, ಟರ್ಕಿಯಿಂದ ಆಮದಾಗುವ ಅಲ್ಯುಮಿನಿಯಂ ಮತ್ತು ಉಕ್ಕಿನ ಮೇಲಿನ ಆಮದು ಸುಂಕವನ್ನು ಅಮೆರಿಕ ದ್ವಿಗುಣಗೊಳಿಸಿತ್ತು.

ಇದಕ್ಕೆ ಪ್ರತಿಯಾಗಿ ಟರ್ಕಿ ಅಮೆರಿಕದ ಇಲೆಕ್ಟ್ರಿಕಲ್ ಉತ್ಪನ್ನಗಳನ್ನು ಬಹಿಷ್ಕರಿಸಿತು ಹಾಗೂ ಅಮೆರಿಕದಿಂದ ಮಾಡಿಕೊಳ್ಳುವ ಆಮದುಗಳ ಮೇಲಿನ ಸುಂಕವನ್ನು ತೀವ್ರವಾಗಿ ಏರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News