​ಲಾಕರ್ ಮುರಿದು ಕಳವು ಪ್ರಕರಣ: ಆರೋಪಿ ಬಂಧನ

Update: 2018-08-16 18:43 GMT

ಮಂಗಳೂರು, ಆ.16: ಸುರತ್ಕಲ್‌ನ ಗ್ಲೌಸಿಯಾ ಕಾಂಪ್ಲೆಕ್ಸ್‌ನಲ್ಲಿರುವ ಅಲ್ಫಾ ಡ್ರೈವಿಂಗ್ ಕಚೇರಿಗೆ ನುಗ್ಗಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸುರತ್ಕಲ್ ನಿವಾಸಿ ಶಾಕೀರ್ (30) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 8,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಡ್ರೈವಿಂಗ್ ಸ್ಕೂಲ್‌ನ ಮಾಲಕ ಪ್ರವೀಣ್ ಆ.14ರಂದು ಸಂಜೆ 6:30ಕ್ಕೆ ಕಚೇರಿಗೆ ಬೀಗ ಹಾಕಿ ಹೋಗಿದ್ದು, ಆ.15ರಂದು ಬೆಳಗ್ಗೆ 9:30ಕ್ಕೆ ಬಂದು ನೋಡಿದಾಗ ಕಳವುಗೈದಿದ್ದು ಬೆಳಕಿಗೆ ಬಂದಿತ್ತು. ಆರೋಪಿಗಳು ಕಚೇರಿಯ ಬಾಗಿಲನ್ನು ಮುರಿದು ಒಳನುಗ್ಗಿ ಕ್ಯಾಶ್ ಲಾಕರನ್ನು ಮುರಿದು ಅದರಲ್ಲಿದ್ದ 14,800 ರೂ. ನಗದು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News