ಮೂಡುಬಿದಿರೆ: ಕಾರ್ಗಿಲ್‍ನಲ್ಲಿ ವೀರಯೋಧರ ಬಲಿದಾನದ ನೆನಪಿಗಾಗಿ ಸ್ಮಾರಕ

Update: 2018-08-16 19:00 GMT

ಮೂಡುಬಿದಿರೆ,ಆ.16: ಕಾರ್ಗಿಲ್‍ನಲ್ಲಿ ವೀರಯೋಧರ ಬಲಿದಾನದ ನೆನಪಿಗಾಗಿ 72 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್‍ನಲ್ಲಿ ಸ್ಮಾರಕವನ್ನು ಉದ್ಘಾಟಿಸಲಾಯಿತು. 

ಬಳಿಕ ನಡೆದ ಸರಳ ಸಮಾರಂಬಧಲ್ಲಿ 26 ಮಾಜಿ ಸೈನಿಕರಿಗೆ ಪುಷ್ಪ ನೀಡಿ ಗೌರವಿಸಲಾಯಿತು. ನಿವೃತ್ತ ಮೇಜರ್ ಸುದೀಪ್ ಪಡಿವಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಆಳ್ವಾಸ್ ಹೆಲ್ತ್ ಸೆಂಟರ್‍ನ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಸುಬೇದಾರ್ ಅಜಿತ್ ಕುಮಾರ್ ಜೈನ್, ಬಡಗ ಎಡಪದವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠ್ಠಲ ಶೆಟ್ಟಿ, ಆಳ್ವಾಸ್ ಹೆಲ್ತ್ ಸೆಂಟರ್‍ನ ನಿರ್ದೇಶಕ ಡಾ.ವಿನಯ ಆಳ್ವ ಮುಖ್ಯ ಅತಿಥಿಯಾಗಿದ್ದರು.

ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಪ್ರಸ್ತುತ ಆಳ್ವಾಸ್ ಹೆಲ್ತ್ ಸೆಂಟರ್‍ನ ಆಡಳಿತಾಧಿಕಾರಿಯಾಗಿರುವ ನಿವೃತ್ತ ಸುಭೇದಾರ್ ಭಾಸ್ಕರ್, ನಿವೃತ್ತ ನಾಯಬ್ ಸುಭೇದಾರ್ ನವಾನಂದ ಅವರು ಕಾರ್ಗಿಲ್‍ನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. 

ಮಾಜಿ ಸೈನಿಕರ ಕುಟುಂಬಿಕರು, ಆಳ್ವಾಸ್ ಹೆಲ್ತ್ ಸೆಂಟರ್‍ನ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News