ಜೋಡುಪಾಲದಲ್ಲಿ ಪ್ರಕೃತಿ ದುರಂತ: ಸ್ಥಗಿತಗೊಂಡ ಪತ್ತೆ ಕಾರ್ಯ

Update: 2018-08-18 03:58 GMT

ಸುಳ್ಯ, ಆ. 18: ಜೋಡುಪಾಲದಲ್ಲಿ ನಡೆದ ಪ್ರಕೃತಿ ದುರಂತದಲ್ಲಿ ಸಮಾಧಿಯಾದವರ ಪತ್ತೆ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಈಗಾಗಲೇ ಒಬ್ಬರ ಮೃತದೇಹ ಹೊರತೆಗೆಯಲಾಗಿದೆ. 

ಈ ಪ್ರದೇಶದಿಂದ ಸ್ಥಳಾಂತರಿಸಲ್ಪಟ್ಟ ನೂರಕ್ಕೂ ಅಧಿಕ ಮಂದಿಯನ್ನು ಸಂಪಾಜೆ, ಅರಂತೋಡು ಶಿಬಿರಗಳಲ್ಲಿದ್ದಾರೆ. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರನ್ನು ಭೇಟಿ ಮಾಡಿದ್ದಾರೆ.

ಸುಳ್ಯ‌ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಮತ್ತು ಎಸ್.ಐ. ಮಂಜುನಾಥ್ ನೇತೃತ್ವದಲ್ಲಿ ಸುಳ್ಯ ಪೊಲೀಸರು, ರಾಷ್ಟ್ರೀಯ ವಿಪತ್ತು ದಳದ ಸದಸ್ಯರು, ಅಗ್ನಿಶಾಮಕ ದಳದವರು ಹಾಗು ಸ್ಥಳೀಯರು ಜೋಡುಪಾಲದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಸುಳ್ಯ ಹಾಗೂ ಪರಿಸರದ ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಿರಾಶ್ರಿತರಿಗೆ ಸಹಾಯಹಸ್ತ ಚಾಚಲು ಆರಂಭಿಸಿದ್ದು, ಈಗಾಗಲೇ ಸಹಾಯ ಹರಿದು ಬರಲಾರಂಭಿಸಿದೆ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News