ತಂಬಾಕು ನಿಯಂತ್ರಣ ಅಭಿಯಾನ: ದಿಲ್ಲಿ ಅಧಿಕಾರಿಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಸ್ತಿ

Update: 2018-08-18 15:08 GMT

ಹೊಸದಿಲ್ಲಿ, ಆ.18: ತಂಬಾಕು ನಿಯಂತ್ರಣಕ್ಕಾಗಿ ಅಭೂತಪೂರ್ವ ಕಾಣಿಕೆ ನೀಡಿದ ದಿಲ್ಲಿ ಸರಕಾರದ ಹೆಚ್ಚುವರಿ ಆರೋಗ್ಯ ನಿರ್ದೇಶಕ ಎಸ್.ಕೆ ಅರೋರಾ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡುವ ಪ್ರತಿಷ್ಠಿತ ವಿಶ್ವ ತಂಬಾಕುರಹಿತ ದಿನ 2018 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

 ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಮುಖ್ಯಸ್ಥ ಹೆಂಕ್ ಬೆಕೆಡಮ್ ಅವರು ಆಗಸ್ಟ 16ರಂದು ನಡೆದ ಸಮಾರಂಭದಲ್ಲಿ ಅರೋರಾಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಿದರು. ದಿಲ್ಲಿಯಲ್ಲಿ ಕಳೆದ ಆರು ವರ್ಷಗಳಲ್ಲಿ ತಂಬಾಕು ಬಳಕೆ ಶೇ.6.5 ಇಳಿಕೆಯಾಗಿದೆ. ಇದು ದೇಶದ ಇತರ ಭಾಗಗಳ ಸರಾಸರಿಗಿಂತ ಹೆಚ್ಚಾಗಿದೆ ಎಂದು ಅರೋರಾ ತಿಳಿಸಿದ್ದಾರೆ. ಭಾರತ ಸರಕಾರದ ರಾಷ್ಟ್ರೀಯ ಆರೋಗ್ಯ ನೀತಿ 2017ರಲ್ಲಿ 2020ರ ವೇಳೆಗೆ ತಂಬಾಕು ಬಳಕೆಯನ್ನು ಶೇ.15 ಮತ್ತು 2025ರ ವೇಳೆಗೆ ಶೇ.30 ಕಡಿಮೆ ಮಾಡುವ ಗುರಿಯನ್ನು ನೀಡಲಾಗಿದೆ. ಈ ಗುರಿಯನ್ನು ದಿಲ್ಲಿ ಈಗಾಗಲೇ ತಲುಪಿದೆ ಎಂದು ಅರೋರಾ ತಿಳಿಸಿದ್ದಾರೆ. ಜಾಗತಿಕ ತಂಬಾಕು ಸಮೀಕ್ಷೆ-2ರ ಪ್ರಕಾರ ದಿಲ್ಲಿಯಲ್ಲಿ ತಂಬಾಕು ಬಳಕೆ ಶೇ.27 ಇಳಿಕೆಯಾಗಿದೆ. ಇದೇ ವೇಳೆ, ದೇಶದ ಇತರ ಭಾಗಗಳಲ್ಲಿ ತಂಬಾಕು ಬಳಕೆ ಸರಾಸರಿ ಶೇ. 17 ಇಳಿಕೆಯಾಗಿದೆ. ದಿಲ್ಲಿಯಲ್ಲಿ ಧೂಮಪಾನಿಗಳ ಸಂಖ್ಯೆ ಶೇ.35 ಇಳಕೆಯಾಗಿದ್ದರೆ ಗುಟ್ಕಾ ಸೇವಿಸುವವರ ಸಂಖ್ಯೆಯಲ್ಲಿ ಶೇ.63 ಇಳಿಕೆಯಾಗಿದೆ. ದೇಶದ ಉತರ ಭಾಗಗಳಲ್ಲಿ ಈ ಪ್ರಮಾಣ ಕ್ರಮವಾಗಿ ಸರಾಸರಿ ಶೇ.23 ಮತ್ತು ಶೇ.17 ಆಗಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News