×
Ad

ಪುತ್ರಿಯ ನಿಶ್ಚಿತಾರ್ಥ ಕಾರ್ಯಕ್ರಮ ರದ್ದುಗೊಳಿಸಿ, ಪರಿಹಾರ ನಿಧಿಗೆ ಹಣ ನೀಡಿದ ತಂದೆ

Update: 2018-08-18 21:40 IST

ಕೊಚ್ಚಿ, ಆ.18: ಸಾಮಾನ್ಯವಾಗಿ ಹೆತ್ತವರು ತಮ್ಮ ಮನೆಯ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಬೇಕು ಎಂದು ಬಯಸುತ್ತಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ ಅದ್ಧೂರಿಯಾಗಿ ನಡೆಯಬೇಕಿದ್ದ ತನ್ನ ಪುತ್ರಿಯ ನಿಶ್ಚಿತಾರ್ಥ ಕಾರ್ಯಕ್ರಮ ರದ್ದುಗೊಳಿಸಿ ಆ ಹಣವನ್ನು ಕೇರಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾರೆ.

ಕೂತುಕುಳಂ ನಿವಾಸಿಯಾಗಿರುವ ಪತ್ರಕರ್ತ ಮನೋಜ್ ರ ಪುತ್ರಿಯ ನಿಶ್ಚಿತಾರ್ಥ ಕಾರ್ಯಕ್ರಮ ಮನೆಯಲ್ಲಿ ನಡೆಯಬೇಕಿತ್ತು. ಆದರೆ ಪ್ರವಾಹದಿಂದ ಕೇರಳ ತತ್ತರಿಸಿರುವ ನಡುವೆ ಕಾರ್ಯಕ್ರಮ ನಡೆಸುವುದು ಮನೋಜ್ ಗೆ ಇಷ್ಟವಿರಲಿಲ್ಲ. ಈ ಬಗ್ಗೆ ವರನೊಂದಿಗೆ ಮಾತನಾಡಿದ ಅವರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.

“ಆಗಸ್ಟ್ 19ರಂದು ನನ್ನ ಪುತ್ರಿ ದೇವಿ ಮತ್ತು ಅಡ್ವಕೇಟ್ ಸುಧಾಕರನ್ ರ ನಿಶ್ಚಿತಾರ್ಥ ನಡೆಯಬೇಕಿತ್ತು. ಆದರೆ ಕೇರಳ ಅನಿರೀಕ್ಷಿತ ದುರಂತಕ್ಕೆ ಸಿಲುಕಿದೆ. ಆದ್ದರಿಂದ ಕಾರ್ಯಕ್ರಮದ ಹಣವನ್ನು ಪರಿಹಾರ ನಿಧಿಗೆ ನೀಡಲು ಎರಡೂ ಕುಟುಂಬದವರು ನಿರ್ಧರಿಸಿದ್ದೇವೆ” ಎಂದು ಮನೋಜ್ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ತಿಳಿಸಿದ್ದಾರೆ.

ಮನೋಜ್ ರ ಈ ಪೋಸ್ಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News