ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯಲ್ಲಿ ವಿಳಂಬ: ವಿವರಣೆ ನೀಡುವಂತೆ ಎಐ ಅಧ್ಯಕ್ಷರಿಗೆ ಸೂಚನೆ

Update: 2018-08-18 17:06 GMT

ಹೊಸದಿಲ್ಲಿ, ಆ.18: ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಮುಕ್ತಾಯಗೊಳಿಸುವಲ್ಲಿ ಆಗಿರುವ ವಿಳಂಬಕ್ಕೆ ಕಾರಣವನ್ನು ತಿಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಏರ್‌ಇಂಡಿಯಾ ಅಧ್ಯಕ್ಷರಿಗೆ ತಿಳಿಸಿದೆ.

ಏರ್‌ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವುದಾಗಿ ವಿಮಾನದ ಗಗನಸಖಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಿ ಜೂನ್ ಒಳಗಡೆ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವೆ ಮೇನಕಾ ಗಾಂಧಿ ಏರ್‌ಇಂಡಿಯಾದ ಆಂತರಿಕ ದೂರು ಸಮಿತಿಗೆ ಸೂಚಿಸಿದ್ದರು.

ಆದರೆ ತನಿಖೆ ಇನ್ನೂ ಮುಕ್ತಾಯವಾಗಿಲ್ಲದ ಹಿನ್ನೆಲೆಯಲ್ಲಿ, ಆಗಸ್ಟ್ 23ರಂದು ಇಲಾಖೆಯ ಕಚೇರಿಗೆ ಹಾಜರಾಗಿ ವಿಳಂಬವಾಗಲು ಕಾರಣವೇನು ಎಂಬುದನ್ನು ತಿಳಿಸಬೇಕು ಎಂದು ಏರ್‌ಇಂಡಿಯಾ ಅಧ್ಯಕ್ಷ ಪ್ರದೀಪ್ ಸಿಂಗ್ ಖರೋಲಾಗೆ ತಿಳಿಸಿದೆ. ಅಲ್ಲದೆ ತನಿಖೆಯಲ್ಲಿ ಆಗಿರುವ ವಿಳಂಬವನ್ನು ಸಚಿವೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರ ಗಮನಕ್ಕೆ ತಂದಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News