ಶೌರ್ಯ ಪ್ರಶಸ್ತಿ ಸ್ವೀಕರಿಸಲಿರುವ ಈ ವಿಶೇಷ ಯೋಧರ ಬಗ್ಗೆ ಗೊತ್ತೇ?

Update: 2018-08-19 05:09 GMT

ಹೊಸದಿಲ್ಲಿ, ಆ.19: ಸ್ಫೋಟಕಗಳು ಮತ್ತು ನೆಲಬಾಂಬ್ ಬಗ್ಗೆ ಮುನ್ನೆಚ್ಚರಿಕೆ ನೀಡುವ ಬಗ್ಗೆ ವಿಶೇಷ ತರಬೇತಿ ಪಡೆದ ಲ್ಯಾಬ್ರಡೋರ್ಸ್‌ ಜೋಡಿಯೊಂದು ಈ ಬಾರಿ ಸ್ವಾತಂತ್ರ್ಯ ದಿನದ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿವೆ. ಯುದ್ಧ ಪ್ರದೇಶದಲ್ಲಿ ಈ ಜೋಡಿ ತೋರಿದ ಸಾಹಸವನ್ನು ಪರಿಗಣಿಸಿ ಸೇನಾ ಮುಖ್ಯಸ್ಥರ ಶ್ಲಾಘನಾ ಪತ್ರದ ಗೌರವ ನೀಡಲಾಗಿದೆ. ಇದರಿಂದ ಈ ಲ್ಯಾಬ್ರಡೋರ್ಸ್‌ ಶ್ವಾನ ಜೋಡಿ ಹೆಚ್ಚಿನ ಸೌಲಭ್ಯ ಹಾಗೂ ಹೆಚ್ಚು ವಿಶ್ರಾಂತಿ ಪಡೆಯಲಿವೆ.
ಗ್ರೇಸಿ (6) ಹಾಗೂ ಡೆನ್ಫಿ (8) ಹಾಗೂ ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ತೋರಿದ ಪರಮವೀರ ಹೆಸರಿನ ಕುದುರೆ, ಶ್ಲಾಘನಾ ಪತ್ರದ ಗೌರವಕ್ಕೆ ಪಾತ್ರವಾಗಿವೆ.

ಇಂಫಾಲ- ಮೊರೆಹ್ ರಾಷ್ಟ್ರೀಯ ಹೆದ್ದಾರಿ 102ರಲ್ಲಿ ಮಾರಕವಾದ ಐಇಡಿ (ಇಂಪ್ರುವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ಪತ್ತೆ ಮಾಡಿದ್ದಕ್ಕಾಗಿ ಗ್ರೇಸಿ ಈ ವಿಶೇಷ ಪುರಸ್ಕಾರಕ್ಕೆ ಪಾತ್ರವಾಗಿದ್ದರೆ, ಡೆನ್ಫಿ, ಹಲವು ಯುಎಕ್ಸ್‌ಓ (ಅನ್‌ಎಕ್ಸ್‌ಪ್ಲೋಡೆಡ್ ಆರ್ಡಿನೆನ್ಸ್) ಮತ್ತು ರಾಕೆಟ್‌ನಿಂದ ಸುರಿಸುವ ಗ್ರೆನೇಡ್‌ಗಳನ್ನು ಜಮ್ಮು ಮತ್ತು ಕಾಶ್ಮೀರದ ದ್ರಾಸ್ ವಲಯದಲ್ಲಿ ಪತ್ತೆ ಮಾಡಿದ್ದ.

ಈ ಸಾಹಸ ಕ್ರಮಗಳು ಹಲವಾರು ಜೀವಗಳನ್ನು ಉಳಿಸುವಲ್ಲಿ ನೆರವಾಗಿದ್ದವು. ಈ ಶ್ವಾನ ಜೋಡಿಯ ಕತ್ತಿನಲ್ಲಿ ಇನ್ನು ಶ್ಲಾಘನಾಪತ್ರದ ಕಾರ್ಡ್‌ಗಳು ರಾರಾಜಿಸಲಿವೆ. ಅಸ್ಸಾಂ ರೈಫಲ್ಸ್‌ನ 16 ಸೇನಾ ಶ್ವಾನದಳದಲ್ಲಿರುವ ಗ್ರೇಸಿ, ಕಳೆದ ನಾಲ್ಕು ವರ್ಷಗಳಿಂದ ಈಶಾನ್ಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News