ರಾತ್ರಿ 9 ಗಂಟೆಯ ನಂತರ ಎಟಿಎಂಗೆ ಹಣ ತುಂಬಿಸುವಂತಿಲ್ಲ

Update: 2018-08-19 08:37 GMT

ಹೊಸದಿಲ್ಲಿ, ಆ.19: ಎಟಿಎಂಗಳಲ್ಲಿ ಹಣ ಖಾಲಿಯಾದರೆ ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆಯ ನಂತರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 6 ಗಂಟೆಯ ನಂತರ ನಗದು ಭರ್ತಿ ಮಾಡಲಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ ಎಂದು ವರದಿಯಾಗಿದೆ. ಇದು ಮುಂದಿನ ವರ್ಷದ ಫೆಬ್ರವರಿಯಿಂದ ಜಾರಿಗೆ ಬರಲಿದೆ.

ಹಣ ತುಂಬಿಸುವ ಕೆಲಸ ಮಾಡುವ ಖಾಸಗಿ ಏಜೆನ್ಸಿಗಳು ಬ್ಯಾಂಕ್ ಗಳಿಂದ ದಿನದ ಮೊದಲಾರ್ಧದಲ್ಲೇ ನಗದು ಪಡೆದು ಶಸ್ತ್ರಸಜ್ಜಿತ ವಾಹನಗಳಲ್ಲಿ ಸಾಗಿಸಬೇಕು ಎಂದು ತಿಳಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎಟಿಎಂಗಳಿಗೆ ಸಂಜೆ 4 ಗಂಟೆಯ ಮೊದಲು ಹಣ ತುಂಬಬೇಕಿದೆ.

ನಗದು ವಾಹನಗಳ ಮೇಲೆ ದಾಳಿ, ಎಟಿಎಂ ಮೋಸದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News