ಪಠ್ಯದಲ್ಲಿ ಮಿಲ್ಖಾ ಸಿಂಗ್ ಬದಲಿಗೆ ಫರ್ಹಾನ್ ಅಖ್ತರ್ ಫೋಟೊ!

Update: 2018-08-19 10:29 GMT

ಪಶ್ಚಿಮ ಬಂಗಾಳ, ಆ.19: ‘ಹಾರುವ ಸಿಖ್’ ಎಂದೇ ಪ್ರಸಿದ್ಧಿ ಗಳಿಸಿರುವ ಮಿಲ್ಖಾ ಸಿಂಗ್ ಅವರಿಗೆ ಸಂಬಂಧಿಸಿದ ಪಾಠವೊಂದರಲ್ಲಿ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರ ಫೋಟೊವನ್ನು ಬಳಸಿರುವುದು ಇದೀಗ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಪಾಠ ಪುಸ್ತಕದಲ್ಲಿ ಈ ಪ್ರಮಾದ ನಡೆದಿದೆ.

2013ರಲ್ಲಿ ತೆರೆಕಂಡಿದ್ದ ‘ಭಾಗ್ ಮಿಲ್ಖಾ ಭಾಗ್’ ಚಿತ್ರದಲ್ಲಿ ಫರ್ಹಾನ್ ಅಖ್ತರ್ ನಟಿಸಿದ್ದರು. ಈ ಬಗ್ಗೆ ಸ್ವತಃ ಫರ್ಹಾನ್ ಟ್ವೀಟ್ ಮಾಡಿದ್ದಾರೆ.

“ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಇಲಾಖೆಗೆ, ಮಿಲ್ಖಾ ಸಿಂಗ್ ಅವರಿಗೆ ಸಂಬಂಧಿಸಿದ ಪಠ್ಯವೊಂದರಲ್ಲಿ ಪ್ರಮಾದ ನಡೆದಿದೆ. ಇದರ ಮುದ್ರಕರಿಗೆ ಈ ಬಗ್ಗೆ ತಿಳಿಸಿ ಪುಸ್ತಕ ಹಿಂದೆಗೆದುಕೊಳ್ಳಬಹುದೇ?” ಎಂದು ಫರ್ಹಾನ್ ಟ್ವೀಟ್ ಮಾಡಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News