ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕುಟುಂಬದ ಮನೆ ಜಲಾವೃತ

Update: 2018-08-19 16:08 GMT

ಎರ್ನಾಕುಳಂ ಆ.19: ಕೇರಳದ ಮಹಾಮಳೆಯ ಸಂಭವಿಸಿದ ನೆರೆಯಿಂದ ನಿರಾಶ್ರಿತರಾದವರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರ ಸಹೋದರ ಹಾಗೂ ಸಹೋದರಿ ಕೂಡ ಸೇರಿದ್ದಾರೆ. ನೆರೆ ಪೀಡಿತವಾದ ಕೇರಳದ ಹಲವು ಪಟ್ಟಣ ಹಾಗೂ ಗ್ರಾಮಗಳಂತೆ ಎರ್ನಾಕುಳಂ ಜಿಲ್ಲೆಯ ಕಾಲಡಿ ಪಟ್ಟಣದಲ್ಲಿರುವ ನ್ಯಾಯಮೂರ್ತಿ ಜೋಸೆಫ್ ಕುಟುಂಬದ ಮನೆ ಕೂಡ ಜಲಾವೃತವಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೋಸೆಫ್ ಅವರ ಕುಟುಂಬದ ಮನೆ ಜಲಾವೃತವಾಗಿ ಆಗಸ್ಟ್ 26ರಂದು ಮುಚ್ಚಲಾದ ಕೊಚ್ಚಿ ವಿಮಾನ ನಿಲ್ದಾಣದಿಂದ 7 ಕಿ. ಮೀ. ದೂರದಲ್ಲಿದೆ. ನ್ಯಾಯಮೂರ್ತಿ ಜೋಸೆಫ್ ಅವರ ಸಹೋದರ ಈ ಮನೆಯಲ್ಲಿ ವಾಸ್ತವ್ಯ ಇದ್ದರು. ಅವರನ್ನು ಮೂರು ದಿನಗಳ ಹಿಂದೆ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಜೋಸೆಪ್ ಅವರಿಗೆ ಇದುವರಿಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ‘‘ಫೋನ್ ಸಿಗ್ನಲ್ ಇಲ್ಲದಿರುವುದು ಸಮಸ್ಯೆಯಾಗಿದೆ.’’ ಎಂದು ಜೋಸೆಫ್ ತಿಳಿಸಿದ್ದಾರೆ. ಅವರ ಸಹೋದರಿ ಕೂಡ ನಿವಾಸ ತ್ಯಜಿಸಿದ್ದಾರೆ ಹಾಗೂ ಪರಿಹಾರ ಶಿಬಿರದಲ್ಲಿ ವಾಸ್ತವ್ಯದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News