ಕೇರಳ ಪ್ರವಾಹ ಸಂತ್ರಸ್ತರಿಗೆ ಉಡುಪು ಕೇಳಿದ್ದಕ್ಕೆ ಬಟ್ಟೆ ಅಂಗಡಿಯನ್ನೇ ಬಿಟ್ಟುಕೊಟ್ಟ ಯುವಕ

Update: 2018-08-20 08:09 GMT

ಕಲ್ಪಟ್ಟ(ಕೇರಳ), ಆ.20: ಕೇರಳದ ಮಳೆ ಸಂತ್ರಸ್ತರಿಗಾಗಿ ಸ್ವಯಂಸೇವಾ ಸಂಘಟನೆಗಳು ಸ್ವಲ್ಪ ಉಡುಪುಗಳನ್ನು ಕೊಡುವಂತೆ ಕೇಳಿದಾಗ ಇಲ್ಲಿನ ಫೈಝಲ್ ಎಂಬವರು ತನ್ನ ಬಟ್ಟೆ ಅಂಗಡಿಯನ್ನೆ ಬಿಟ್ಟುಕೊಟ್ಟು ಮಾದರಿಯಾಗಿದ್ದಾರೆ.

ಫೈಝಲ್ ಕಲ್ಪಟ್ಟ ಪಿಣಂಗೋಡ್ ರಸ್ತೆಯಲ್ಲಿರುವ ಕಲ್ಪಟ್ಟ ರೆಡಿಮೇಡ್ಸ್ ಎಂಬ ಬಟ್ಟೆ ಅಂಗಡಿಯನ್ನು ಹೊಂದಿದ್ದು, ಈ ರೀತಿ ಅವರು  ತನ್ನ ಅಂಗಡಿಯಲ್ಲಿರುವ ಎಲ್ಲ ಬಟ್ಟೆಗಳನ್ನು ಸಂತ್ರಸ್ತರಿಗೆ ಅರ್ಪಿಸಿದರು.

ಅವರ ಬಳಿಗೆ ಸಹಾಯ ಯಾಚಿಸಿ ಬಂದ ಫೈಟ್ ಫಾರ್ ಲೈಫ್ ಎಂಬ ಸ್ವಯಂಸೇವಾ ಸಂಘಟನೆಯ ಕಾರ್ಯಕರ್ತರಿಗೆ ಶೋರೂಮಿನ ಲಕ್ಷಾಂತರ ರೂಪಾಯಿ ಮೌಲ್ಯದ ಹೊಸ ಬಟ್ಟೆಗಳನ್ನು ಸಂತ್ರಸ್ತರ ನಡುವೆ ವಿತರಿಸಲು ಫೈಝಲ್ ಕೊಡುಗೆಯಾಗಿ ನೀಡಿದರು. ಹಳೆ ವೈತ್ತಿರಿ ನಿವಾಸಿಯಾದ ಫೈಝಲ್ ಈಗ ಕಲ್ಪಟ್ಟ ಪುಳಿಯಾರ್‍ಮಲ ಎಂಬಲ್ಲಿ ಮನೆಯನ್ನು ಹೊಂದಿದ್ದಾರೆ.

ಫೈಝಲ್ ರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News