ಟುಡೇ ಫೌಂಡೇಶನ್ ಫರಂಗಿಪೇಟೆ, ಬ್ಲಡ್ ಹೆಲ್ಪ್ ಲೈನ್ ವತಿಯಿಂದ ರಕ್ತದಾನ ಶಿಬಿರ

Update: 2018-08-20 09:22 GMT

ಬಂಟ್ವಾಳ, ಆ. 20: ಟುಡೇ ಫೌಂಡೇಶನ್ ಫರಂಗಿಪೇಟೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಪುದು ಗ್ರಾಮದ ಸುಜೀರ್ ಸರಕಾರಿ ಫ್ರೌಢ ಶಾಲೆಯಲ್ಲಿ ರವಿವಾರ ನಡೆಯಿತು.
ಬಂಟ್ವಾಳ ಗ್ರಾಮಾಂತರ ಠಾಣೆ ಎಸ್ಸೈ ಪ್ರಸನ್ನ ಕುಮಾರ್ ಶಿಬಿರವನ್ನು ಉದ್ಘಾಟಿಸಿದರು.

ಟುಡೇ ಫೌಂಡೇಶನ್ ಅಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಸದಸ್ಯ ಅಸೀಫ್ ಇಕ್ಬಾಲ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷ ಲಿಡಿಯಾ ಪಿಂಟೋ, ಗ್ರಾಪಂ ಸದಸ್ಯರಾದ ಹಾಶೀರ್ ಪೆರಿಮಾರ್, ಇಕ್ಬಾಲ್ ಸುಜೀರ್, ಮುಹಮ್ಮದ್ ಫರಂಗಿಪೇಟೆ, ಝಾಹೀರ್ ಅಬ್ಬಾಸ್, ರಿಯಾಝ್ ಕುಂಪನಮಜಲ್, ಭಾಸ್ಕರ್ ರೈ, ಸುಜಾತಾ ಮಾರಿಪಳ್ಳ, ಹುಸೇನ್, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಇಂತ್ತಿಯಾಝ್ ತುಂಬೆ, ಅಶ್ರಫ್ ಅರಬಿ ಕಲ್ಲಡ್ಕ, ನಾಸಿರ್ ಬಂಟ್ವಾಳ, ತೇಜಸ್ವಿನಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಅಧಿಕಾರಿ ಶಿಲ್ಪಾ, ಎಫ್.ಎಂ. ಬಶೀರ್, ಇಜಾಝ್ ಬಜಾಲ್, ನಾಸೀರ್ ಬಿ.ಸಿ.ರೋಡ್, ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಬ್ದುಲ್ ಸಮಾದ್, ಯುವ ಕಾಂಗ್ರೆಸ್ ಮಿಲಾಗ್ರಿಸ್ ಘಟಕದ ಅಧ್ಯಕ್ಷ ತೌಸಿಫ್, ಎಂ.ಕೆ. ಮುಹಮ್ಮದ್, ಮಾಜೀದ್ ಫರಂಗಿಪೇಟೆ, ಸಲೀಂ ತೆಲ್ಲಿ, ಬಾಫೀ ಫರಂಗಿಪೇಟೆ ಉಪಸ್ಥಿತರಿದ್ದರು.

ಮದ್ರಸ ವಿದ್ಯಾರ್ಥಿ ಮರ್ಷದ್ ಮಾರಿಪಳ್ಳ ಕುರ್‌ಆನ್ ಪಠಿಸಿದರು. ಸರಕಾರಿ ಪ್ರೌಢ ಶಾಲೆ ಶಿಕ್ಷಕ ಬಿ.ಮುಹಮ್ಮದ್ ತುಂಬೆ ಸ್ವಾಗತಿಸಿ, ನಿರೂಪಿಸಿದರು.
ಶಿಬಿರದಲ್ಲಿ ಸುಮಾರು 80 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಟುಡೇ ಫೌಂಡೇಶನ್ ಫರಂಗಿಪೇಟೆ ತಂಡದ ಸದಸ್ಯರಾದ ರಫೀಕ್ ಪೆರಿಮಾರ್, ಶೌಕತ್ ಅಲಿ ಮಾರಿಪಳ್ಳ, ಮಾಜೀದ್ ಪೆರಿಮಾರ್, ಲತೀಫ್ ಮಲಾರ್, ದಿರ್ಶಾದ್ ಪೇರಿಮಾರ್, ಇನ್ಸಾದ್ ಮಾರಿಪಳ್ಳ ಹಾಗೂ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News