ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್‌ನಿಂದ ರ್ಯಾಲಿ

Update: 2018-08-20 12:05 GMT

ಉಳ್ಳಾಲ, ಆ.20: ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವತಿಯಿಂದ ‘ನಮ್ಮ ಮಕ್ಕಳು ನಮ್ಮವರಾಗಲು’ ಎಂಬ ಘೋಷಣೆಯೊಂದಿಗೆ ಕಿನ್ಯ ಬೆಳರಿಂಗೆಯಲ್ಲಿ ರವಿವಾರ ಬೈಕ್ ರ್ಯಾಲಿ, ಬೀದಿ ಭಾಷಣದ ಸಮಾರೋಪ ಕಾರ್ಯಕ್ರಮ ನಡೆಯಿತು.

ಎಸ್‌ವೈಎಸ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಮುನೀರ್ ಸಖಾಫಿ ಮಾತನಾಡಿ ‘ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಭಾರತದ ಪ್ರಜೆಯಾಗಿ ಬೆಳೆಸಬೇಕು. ಉತ್ತಮ ಗುಣ ಚಾರಿತ್ರ ನಮ್ಮ ಮಕ್ಕಳಲ್ಲಿ ಬೇಕು ಎಂದು ಹೇಳಿದರು.

ಕಿನ್ಯಾ ದರ್ಗಾ ಝಿಯಾರತ್‌ನೊಂದಿಗೆ ಬೈಕ್ ರ್ಯಾಲಿ ಮತ್ತು ಬೀದಿ ಭಾಷಣವನ್ನು ಸುರಿಬೈಲ್ ಉಸ್ತಾದ್ ಉದ್ಘಾಟಿಸಿದರು ಸೈಯದ್ ಆಲವಿ ತಂಙಳ್ ದುಆ ನೆರವೇರಿಸಿದರು.ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ ಜಲಪ್ರಳಯ ಪ್ರದೇಶಕ್ಕೆ ನಡೆಸಲಾಗುವ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು.

ಸಮಾರೋಪ ಸಮಾರಂಭವನ್ನು ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು. ಕಿನ್ಯ ಗ್ರಾಪಂ ಸದಸ್ಯರಾದ ಫಾರೂಕ್ ಕಿನ್ಯ, ಹಮೀದ್ ಕಿನ್ಯ, ಮುಹಮ್ಮದ್, ಎಸ್‌ಎಂಎ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯೀಲ್, ಉಕ್ಕುಡ ಎಸ್‌ವೈಎಸ್ ಅಧ್ಯಕ್ಷ ಮುಹಮ್ಮದ್, ಹನೀಫ್, ತ್ವಾಹಾ ತಂಙಳ್,ಎಸ್‌ವೈಎಸ್ ಉಳ್ಳಾಲ ಡಿವಿಷನ್ ಕಾರ್ಯದರ್ಶಿ ಹಮೀದ್, ಜಿ.ಎ. ಇಬ್ರಾಹೀಂ, ಜಮಾಲುದ್ದೀನ್ ಸಖಾಫಿ, ಮುಸ್ತಫಾ ನಮೀಮಿ, ಎಸ್‌ವೈಎಸ್ ಮೀಂಪ್ರಿ ಕಾರ್ಯದರ್ಶಿ ಸತ್ತಾರ್, ಅಶ್ರಫ್ ಸಖಾಫಿ ಕನ್ನಂಗಾರ್, ಉಸ್ಮಾನ್ ಸಖಾಫಿ, ಮೆಹಬೂಬ್ ಸಖಾಫಿ, ಅಹ್ಮದ್ ಹಾಜಿ, ಅಬೂಬಕರ್, ಅಹ್ಮದ್ ಕುಂಞಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News