ವಂಡ್ಸೆ ಎಸ್‌ಎಲ್‌ಆರ್‌ಎಂ ಘಟಕದ ಯಶಸ್ಸಿನ ಅನುಭವ, ಮಾಹಿತಿ ಪಡೆದುಕೊಂಡ ಸಚಿವರು

Update: 2018-08-20 15:00 GMT

ಉಡುಪಿ, ಆ. 20: ಉಡುಪಿ ಜಿಲ್ಲೆಯ ಪ್ರಥಮ, ವಂಡ್ಸೆ ಗ್ರಾಪಂನ ಘನ ಮತ್ತು ದ್ರವ ಸಂಪನ್ಮೂಲಗಳ ನಿರ್ವಹಣಾ ಘಟಕ(ಎಸ್‌ಎಲ್‌ಆರ್‌ಎಂ)ಕ್ಕೆ ಸೋಮವಾರ ಭೇಟಿ ನೀಡಿದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ, ಅದರ ಯಶಸ್ಸಿನ ಅನುಭವ ಹಾಗೂ ಮಾಹಿತಿಗಳನ್ನು ಪಡೆದುಕೊಂಡರು.

ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಘಟಕದ ಮೇಲ್ವಿಚಾರಕಿ ವಿಜಯಲಕ್ಷ್ಮೀ ಹಾಗೂ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ನೋಡೆಲ್ ಅಧಿಕಾರಿಯಾಗಿರುವ ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಘಟಕಕ್ಕೆ ಸಂಬಂಧಿಸಿ ಪ್ರತಿಯೊಂದು ಮಾಹಿತಿಯನ್ನು ಸಚಿವರಿಗೆ ನೀಡಿದರು.

‘11 ತಿಂಗಳ ಹಿಂದೆ ಈ ಘಟಕವನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲ ಮನೆಗಳ ಸರ್ವೆ ನಡೆಸಿ, ನಂತರ ಮನೆಗಳಿಗೆ ಬಕೆಟ್ ಗಳನ್ನು ವಿತರಿಸಲಾಯಿತು. ಪ್ರಸ್ತುತ ಎಂಟು ಜನ ಇದರಲ್ಲಿ ತೊಡಗಿಸಿಕೊಂಡಿ ದ್ದೇವೆ. ಗ್ರಾಪಂ ವ್ಯಾಪ್ತಿಯ 650 ಮನೆ ಹಾಗೂ ಅಂಗಡಿಗಳಿಂದ ಕಸಗಳನ್ನು ಸಂಗ್ರಹಿಸಲಾಗುತ್ತಿದೆ. ಪೇಟೆಯಲ್ಲಿ 240 ಅಂಗಡಿ ಹಾಗೂ ಮನೆಗಳಿಂದ ದಿನಕ್ಕೆ ಎರಡು ಬಾರಿ ಹಸಿ ಮತ್ತು ಒಣ ಕಸವನ್ನು ಹಾಗೂ ಗ್ರಾಮೀಣ ಪ್ರದೇಶದಲ್ಲಿ ರುವ ಉಳಿದ ಮನೆಗಳಿಂದ ವಾರಕ್ಕೆ ಒಂದು ಬಾರಿ ಹಸಿ ಕಸವನ್ನು ಸಂಗ್ರಹಿಸ ಲಾಗುತ್ತಿದೆ. ಈ ಮನೆಯವರು ಹಸಿ ಕಸವನ್ನು ಅವರೇ ವಿಲೇವಾರಿ ಮಾಡಿ ಕೊಳ್ಳುತ್ತಾರೆ’ ಎಂದು ಘಟಕದ ಮೆಲ್ವಿಚಾರಕಿ ವಿಜಯಲಕ್ಷ್ಮೀ ತಿಳಿಸಿದರು.

‘ಘಟಕದಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡುತ್ತೇವೆ. ಹಸಿ ಕಸದಲ್ಲಿರುವ ತರಕಾರಿಗಳನ್ನು ಬೇರ್ಪಡಿಸಿ ಗ್ರಾಪಂ ವತಿಯಿಂದ ಸಾಕುತ್ತಿ ರುವ ಮೂರು ದನಗಳಿಗೆ ನೀಡುತ್ತೇವೆ. ಉಳಿದ ಕಸಗಳನ್ನು ಗೊಬ್ಬರ ಮಾಡ ಲಾಗುತ್ತದೆ. ಪ್ರತಿ ದಿನ 50-60 ಕೆ.ಜಿ. ಹಸಿಕಸಗಳು ಸಂಗ್ರಹಿಸಿ, ಅದರಲ್ಲಿ ಒಟ್ಟು 400ಕೆ.ಜಿ. ಗೊಬ್ಬರವನ್ನು ಪಡೆಯುತ್ತೇವೆ. ಆ ಗೊಬ್ಬರವನ್ನು ತೋಟ ಗಾರಿಕೆ ಇಲಾಖೆಯವರು ಖರೀದಿಸುತ್ತಿದ್ದಾರೆ. ಒಣ ಕಸವನ್ನು ತೊಳೆದು 65 ರೀತಿಯಲ್ಲಿ ವಿಂಗಡನೆ ಮಾಡಿ, ಮಾರಾಟ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

‘ಕಸ ಸಂಗ್ರಹದ ವಾಹನದ ನಿರ್ವಹಣೆ, ಕೆಲಸದವರ ಸಂಬಳ ಸೇರಿದಂತೆ ಪ್ರತಿ ತಿಂಗಳು 85 ಸಾವಿರ ರೂ. ಬೇಕಾಗುತ್ತದೆ. ಕಸ ಶುಲ್ಕದಿಂದ 33,600ರೂ. ಸಂಗ್ರಹಿಸಿದರೆ, ಕಸ ಹಾಗೂ ಗೊಬ್ಬರಗಳ ಮಾರಾಟದಿಂದ ಸುಮಾರು 25 ಸಾವಿರ ರೂ. ಹಣ ಬರುತ್ತದೆ. ಹೀಗೆ ತಿಂಗಳಿಗೆ ಸರಾಸರಿ 75ಸಾವಿರ ರೂ. ಖರ್ಚು ಮತ್ತು ಆದಾಯ ಇದರಲ್ಲಿ ಇದೆ. ಮುಂದೆ ಹಸಿ ಕಸಗಳಿಂದ ಗ್ಯಾಸ್ ಹಾಗೂ ವಿದ್ಯುತ್ ಉತ್ಪಾದನೆ ಮಾಡಿ ಗ್ರಾಪಂ, ಅಂಗನವಾಡಿ ಹಾಗೂ ಶಾಲೆಯ ಬಳಸಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಉದು ಕುಮಾರ್ ಶೆಟ್ಟಿ ಹೇಳಿದರು.

‘ಈ ರೀತಿಯ ಘಟಕವನ್ನು ಜಿಲ್ಲೆಯ ಒಟ್ಟು 13 ಗ್ರಾಪಂಗಳಲ್ಲಿ ಆರಂಭಿಸ ಲಾಗಿದೆ. ಕುಂದಾಪುರ ತಾಲೂಕಿನ ವಂಡ್ಸೆ, ಕರ್ಕುಂಜೆ, ಹೊಂಬಾಡಿ ಮಂಡಾಡಿ, ಗಂಗೊಳ್ಳಿ, ಮರವಂತೆ ಸೇರಿದಂತೆ ಆರು, ಉಡುಪಿ ತಾಲೂಕಿನ ಒಂದು ಮತ್ತು ಕಾರ್ಕಳ ತಾಲೂಕಿನ ನಾಲ್ಕು ಗ್ರಾಪಂಗಳಲ್ಲಿ ಈ ಘಟಕ ಉತ್ತಮವಾಗಿ ಮುಂದುವರಿಯುತ್ತಿದೆ ಎಂದು ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ನೋಡೆಲ್ ಅಧಿಕಾರಿ ಶ್ರೀನಿವಾಸ್ ರಾವ್ ತಿಳಿಸಿದರು. ಬಳಿಕ ಮಾತನಾಡಿದ ಸಚಿವರು, ಈ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಯಾಗಿ ನಡೆಸಲು ಹೆಚ್ಚು ಹೆಚ್ಚು ಪ್ರಾಯೋಗಿಕವಾಗಿ ಮಾಡಬೇಕು. ಗೊಬ್ಬರ ತಯಾರಿಕೆ ಹಂತದಲ್ಲಿ ಅದರ ನೀರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನ ವನ್ನು ಬಳಸಿಕೊಳ್ಳಬೇಕು. ಇದಕ್ಕೆ ಬೇಕಾದ ಇನ್ನಷ್ಟು ಮಾಹಿತಿಗಳನ್ನು ಕೃಷಿ ವಿವಿಯ ಪ್ರಾಧ್ಯಾಪಕರಿಂದ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ವಂಡ್ಸೆ ಪಂಚಾ ಯತ್ ಅಭಿವೃದ್ಧಿ ಅಧಿಕಾರಿ ಶಂಕರ ಆಚಾರ್ಯ, ರಾಜು ಪೂಜಾರಿ, ವಾಸು ದೇವ ಯಡಿಯಾಳ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News