ಈ ಸಿಹಿತಿಂಡಿಗೆ ಕೆ.ಜಿ.ಗೆ 9,000 ರೂ.!
Update: 2018-08-21 19:33 IST
ಸೂರತ್, ಆ.21: ರಕ್ಷಾಬಂಧನ ಹಬ್ಬಕ್ಕೆ ಇನ್ನೇನು ಕೆಲ ದಿನಗಳಿವೆ. ಈ ನಡುವೆ ರಕ್ಷಾ ಬಂಧನ ಪ್ರಯುಕ್ತ ತಯಾರಿಸಲಾದ ವಿಶೇಷ ಸಿಹಿತಿಂಡಿಯೊಂದು ಎಲ್ಲರ ಗಮನಸೆಳೆಯುತ್ತಿದೆ. ಇದಕ್ಕೆ ಕಾರಣ ಕಿಲೋವೊಂದಕ್ಕೆ ಇದರ ಬೆಲೆ ಬರೋಬ್ಬರಿ 9000 ಕೆ.ಜಿ.
ಹೌದು ನಂಬಲಸಾಧ್ಯವಾದರೂ ಇದು ಸತ್ಯ. ಗೋಲ್ಡ್ ಲೀಫ್ ಲೇಯರಿಂಗ್ ಇರುವ ಈ ಸಿಹಿತಿಂಡಿ ಚಿನ್ನದಂತೆ ಮಿರಮಿರನೆ ಮಿಂಚುತ್ತದೆ. ’24 ಕ್ಯಾರಟ್ ಮಿಠಾಯಿ ಮ್ಯಾಜಿಕ್’ ಎಂದು ಈ ಸಿಹಿತಿಂಡಿಗೆ ಹೆಸರಿಡಲಾಗಿದೆ. ಈ ಸಿಹಿತಿಂಡಿಯ ಮೇಲ್ಮೈಯಲ್ಲಿ 24 ಕ್ಯಾರಟ್ ನ ಪದರವಿದೆ.
ನಮ್ಮ ಈ ತಿಂಡಿ ಜನರನ್ನು ಆಕರ್ಷಿಸಿವೆ ಎನ್ನುತ್ತಾರೆ ಅಂಗಡಿ ಮಾಲಕ ಬ್ರಿಜ್ ಮಿಠಾಯ್ ವಾಲಾ. ಚಿನ್ನ ಸೇವನೆಯಿಂದ ಲಭಿಸುವ ಆರೋಗ್ಯ ಲಾಭಗಳ ಬಗ್ಗೆ ತಿಳಿದಿರುವುದರಿಂದ ಜನರು ಈ ಸಿಹಿತಿಂಡಿ ಖರೀದಿಸಲು ಉತ್ಸುಕರಾಗಿದ್ದಾರೆ ಎಂದವರು ಹೇಳುತ್ತಾರೆ.