ಮಹಿಳೆಯರಿಬ್ಬರಿಗೆ ಲೈಂಗಿಕ ಕಿರುಕುಳ: ದೇವಸ್ಥಾನದ ಅರ್ಚಕ ಶರಣಾಗತಿ

Update: 2018-08-21 14:17 GMT

ಪಣಜಿ,ಆ.21: ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿರುವ ಗೋವಾದ ಪ್ರಸಿದ್ಧ ಮಂಗೇಶಿ ದೇವಸ್ಥಾನದ ಮಾಜಿ ಅರ್ಚಕ ಧನಂಜಯ ಭಾವೆ(51) ಮಂಗಳವಾರ ಪೊಂಡಾದ ನ್ಯಾಯಾಲಯದಲ್ಲಿ ಶರಣಾಗಿದ್ದು,ಆತನನ್ನು ಬಂಧಿಸಲಾಗಿದೆ.

 ಕಳೆದ ಎರಡು ತಿಂಗಳುಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರತ್ಯೇಕ ಸಂದರ್ಭಗಳಲ್ಲಿ ಭಾವೆ ತಮಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಪ್ರಸ್ತುತ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಮುಂಬೈ ಮೂಲದ ಮಹಿಳೆಯರಿಬ್ಬರು ಕಳೆದ ತಿಂಗಳು ಪೊಲೀಸರಿಗೆ ದೂರು ಸಲ್ಲಿಸಿದ್ದರು. ನಂತರ ಭಾವೆಯನ್ನು ಕೆಲಸದಿಂದ ಕಿತ್ತು ಹಾಕಿದ್ದು,ಆಗಿನಿಂದಲೂ ತಲೆ ಮರೆಸಿಕೊಂಡಿದ್ದ.

ಭಾವೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಜಿಲ್ಲಾ ನ್ಯಾಯಾಲಯ ಮತ್ತು ಮುಂಬೈ ಉಚ್ಚ ನ್ಯಾಯಾಲಯದ ಗೋವಾ ಪೀಠ ತಿರಸ್ಕರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News