ಸೆಪ್ಟಂಬರ್ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯ ಮುನ್ನೆಚ್ಚರಿಕೆಯ ನೂತನ ಚಿತ್ರ

Update: 2018-08-21 14:43 GMT

ಹೊಸದಿಲ್ಲಿ, ಆ. 21: ಸೆಪ್ಟಂಬರ್ 1ರಿಂದ ತಂಬಾಕು ಉತ್ಪನ್ನಗಳು ಶೇ. 85 ಭಾಗ ಆರೋಗ್ಯ ಮುನ್ನೆಚ್ಚರಿಕೆಯ ಚಿತ್ರಗಳನ್ನು ಪ್ರದರ್ಶಿಸಲಿದೆ. ಮುಂದಿನ ಎರಡು ವರ್ಷಗಳ ವರೆಗೆ ಅವಧಿ ವಿಸ್ತರಿಸುವುದರೊಂದಿಗೆ ಎಲ್ಲ ಹೊಗೆಸೊಪ್ಪು ಉತ್ಪನ್ನಗಳಲ್ಲಿ ನೂತನ ಆರೋಗ್ಯ ಮುನ್ನೆಚ್ಚರಿಕೆಗಳನ್ನು ಸಿದ್ದಗೊಳಿಸಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.

 ಈ ದಿನಾಂಕ ಹಾಗೂ ಅನಂತರ ದಿನಾಂಕದಲ್ಲಿ ಉತ್ಪಾದನೆಯಾದ, ಆಮದಾದ ಹಾಗೂ ಪ್ಯಾಕ್ ಆದ ಎಲ್ಲ ತಂಬಾಕು ಉತ್ಪನ್ನಗಳು ಈ ಚಿತ್ರಗಳನ್ನು ಪ್ರದರ್ಶಿಸಲಿದೆ. 2008 ಎಪ್ರಿಲ್‌ನಲ್ಲಿ ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯ್ದೆಯಲ್ಲಿ ಕೇಂದ್ರ ಸರಕಾರ ತಿದ್ದುಪಡಿ ತಂದಿತ್ತು. ಎರಡು ಹಂತಗಳ ನಿರ್ದಿಷ್ಟ ಆರೋಗ್ಯ ಮುನ್ನೆಚ್ಚರಿಕೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿತ್ತು. ಮೊದಲ ಹಂತದ ಅವಧಿ ಒಂದು ವರ್ಷ. ಮೊದಲ ಹಂತದ ಅವಧಿ 2019 ಸೆಪ್ಟಂಬರ್ 1ರಂದು ಮುಗಿದ ಬಳಿಕ ಅಲ್ಲಿಂದ ಎರಡನೇ ಹಂತದ ಅವಧಿ ಜಾರಿಗೊಳಿಸಲಾಗುವುದು.

ಎರಡನೆ ಹಂತದ ಅವಧಿ 2020 ಸೆಪ್ಟಂಬರ್ 1ರ ವರೆಗೆ ಚಾಲ್ತಿಯಲ್ಲಿ ಇರಲಿದೆ. ಸಿಗರೇಟು ಅಥವಾ ಯಾವುದೇ ತಂಬಾಕು ಉತ್ಪನ್ನಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಉತ್ಪಾದಿಸುವ, ಪೂರೈಸುವ, ಆಮದು ಮಾಡುವ ಅಥವಾ ವಿತರಿಸುವುದರಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಸೂಚಿಸಿದಂತೆ ನಿರ್ದಿಷ್ಟ ಆರೋಗ್ಯ ಎಚ್ಚರಿಕೆಯನ್ನು ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಪ್ರದರ್ಶಿಸುವಂತೆ ಆರೋಗ್ಯ ಸಚಿವಾಲಯ ಅಧಿಸೂಚನೆಯಲ್ಲಿ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News