ಕಾಸರಗೋಡು : ಮನೆಯ ಗೋಡೆಗೆ ಢಿಕ್ಕಿ ಹೊಡೆದ ಬಸ್; 40 ಮಂದಿಗೆ ಗಾಯ

Update: 2018-08-22 15:12 GMT

ಕಾಸರಗೋಡು, ಆ. 22 : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸು ಮನೆಯ ಗೋಡೆಗೆ ಬಡಿದ ಘಟನೆ ರಾಜಪುರಂನಲ್ಲಿ ಬುಧವಾರ ನಡೆದಿದೆ.

ಅಪಘಾತದಲ್ಲಿ 40 ಮಂದಿ ಗಾಯಗೊಂಡಿದ್ದು , ಓರ್ವನ ಸ್ಥಿತಿ ಗಂಭೀರವಾಗಿದೆ.  ಕಾಞ೦ಗಾಡ್ ನಿಂದ  ಪಾಣತ್ತೂರಿಗೆ ತೆರಳುತ್ತಿದ್ದ ಬಸ್ಸು ರಸ್ತೆಯಿಂದ  ಸಮೀಪದ ಮನೆಯ ಗೋಡೆಗೆ ಬಡಿದಿದ್ದು, ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಗಾಯಗೊಂಡವರನ್ನು ಕಾಞ೦ಗಾಡ್ ಮತ್ತು ಮಾವುಂಗಾಲ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಓರ್ವ ಪ್ರಯಾಣಿಕನನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News