ಕೇರಳ, ಕೊಡಗು ನೆರೆ ಸಂತ್ರಸ್ತ ಮಹಿಳೆಯರಿಗೆ ನೆರವು

Update: 2018-08-24 16:28 GMT

ಉಡುಪಿ, ಆ.24: ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸ್ತ್ರೀ ಸಂಘಟನೆ ಕೊಡಗು ಹಾಗೂ ಕೇರಳ ನೆರೆ ಸಂತ್ರಸ್ತ ಮಹಿಳೆಯರ ಸಮಸ್ಯೆಗಳನ್ನು ಅರಿತು ಕೊಂಡು ಪ್ರಾಥಮಿಕ ಅಗತ್ಯತೆಗಳಿಗೆ ಸ್ಪಂದಿಸುವ ಮೂಲಕ ಮಾನವಿಯತೆಯನ್ನು ಮೆರೆದಿದೆ.

ಕಾರ್ಕಳ, ಕುಂದಾಪುರ, ಕಲ್ಯಾಣ್ಯಪುರ, ಉಡುಪಿ ಹಾಗೂ ಶಿರ್ವ ವಲಯ ಸಮಿತಿ ಹಾಗೂ ಧರ್ಮಪ್ರಾಂತದ ಎಲ್ಲಾ ಘಟಕ ಸಮಿತಿಗಳ ಮಹಿಳೆಯರು ತಮ್ಮ ಸ್ವ-ಉಳಿತಾಯದ ಹಣದಿಂದ 6,37,350 ರೂ. ಮೌಲ್ಯದ ಮಹಿಳೆ ಯರ ಉಡುಪುಗಳು, ಒಳ ಉಡುಪು ಹಾಗೂ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸಂಗ್ರಹಿಸಿದ್ದು, ಈ ಎಲ್ಲಾ ವಸ್ತುಗಳು ಸುಲಲಿತವಾಗಿ ಸರಿಯಾದ ರೀತಿಯಲ್ಲಿ ಸ್ತ್ರೀಯರ ಕೈಗಳಿಗೆ ತಲುಪುವಂತೆ ಉಡುಪಿ ಧರ್ಮಪ್ರಾಂತದ ಸುಪರ್ದಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News