ಮುಂದಿನ ತಿಂಗಳಿಂದ ರೈಲು ಪ್ರಯಾಣಕ್ಕೆ ಪರಿಷ್ಕೃತ ಫ್ಲೆಕ್ಸಿ ದರ
Update: 2018-08-25 21:48 IST
ಹೊಸದಿಲ್ಲಿ, ಆ. 25: ನೂತನ ದರ ಪಟ್ಟಿ (ಫ್ಲೆಕ್ಸಿ ದರ)ಯ ಎಲ್ಲ ಸಿದ್ಧತೆಯನ್ನು ರೈಲ್ವೆ ಮಾಡಿಕೊಂಡಿದ್ದು, ಇದರಿಂದ ಪ್ರಥಮ ದರ್ಜೆಯ ರೈಲು ಪ್ರಯಾಣಕ್ಕೆ ವಿಮಾನ ದರಕ್ಕಿಂತ ಹೆಚ್ಚು ಪಾವತಿಸುವ ಕೆಲವು ವಿಭಾಗಗಳ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಸರಾಸರಿ ಶೇ. 30ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ರೈಲುಗಳನ್ನು ಪ್ರಯೋಗಾತ್ಮಕವಾಗಿ ಈ ಯೋಜನೆಯಲ್ಲಿ ರದ್ದುಗೊಳಿಸಲು ಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮೊದಲ ಶೇ. 50 ಬರ್ತ್‌ಗಳನ್ನು ಮೂಲ ದರಕ್ಕಿಂತ ಶೇ. 15ರಷ್ಟು ಹೆಚ್ಚು ದರ ವಿಧಿಸುವ ಹಮ್ಸಫರ್ ರೈಲುಗಳಲ್ಲಿ ಬಳಸಿದ ಸೂತ್ರದಂತೆ ಈ ಯೋಜನೆಯನ್ನು ಪರಿಷ್ಕರಿಸಲು ಪರಿಗಣಿಸುವ ಇನ್ನೊಂದು ಆಯ್ಕೆ ಕೂಡ ಇದೆ ಎಂದು ಅದು ತಿಳಿಸಿದೆ. ಈ ಯೋಜನೆ ಬಗ್ಗೆ ಮುಂದಿನ ವಾರ ಘೋಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.