ಡಿಆರ್‌ಡಿಒ ಅಧ್ಯಕ್ಷ ಸ್ಥಾನಕ್ಕೆ ಹೆಸರಾಂತ ವಿಜ್ಞಾನಿ ಜಿ. ಸತೀಶ್ ರೆಡ್ಡಿ ನಿಯೋಜನೆ

Update: 2018-08-25 16:19 GMT

ಹೊಸದಿಲ್ಲಿ, ಆ. 25: ಹೆಸರಾಂತ ವಿಜ್ಞಾನಿ ಜಿ. ಸತೀಶ್ ರೆಡ್ಡಿ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಅಧ್ಯಕ್ಷರಾಗಿ ನಿಯೋಜಿತರಾಗಿದ್ದಾರೆ. ರೆಡ್ಡಿ ಅವರು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರು. ರೆಡ್ಡಿ ಅವರನ್ನು ಎರಡು ವರ್ಷಗಳ ಅವಧಿಗೆ ಡಿಆರ್‌ಡಿಒದ ಅಧ್ಯಕ್ಷರಾಗಿ ನಿಯೋಜಿಸಲಾಗಿದೆ. ಇದಲ್ಲದೆ ಅವರನ್ನು ಇದೇ ಅವಧಿಗೆ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆ (ಡಿಒಡಿಆರ್‌ಡಿ)ಯ ಕಾರ್ಯದರ್ಶಿ ಯನ್ನಾಗಿ ಕೂಡ ನಿಯೋಜಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ನೀಡಿದ ಹೇಳಿಕೆ ತಿಳಿಸಿದೆ.

 ಕಳೆದ ವರ್ಷ ಮೇಯಲ್ಲಿ ಎಸ್. ಕ್ರಿಸ್ಟೋಫರ್ ಅವರು ತಮ್ಮ ಅಧಿಕಾರದ ಅವಧಿ ಪೂರ್ಣಗೊಳಿಸಿದ ಬಳಿಕ ಸುಮಾರು 3 ತಿಂಗಳುಗಳ ಕಾಲ ಡಿಆರ್‌ಡಿಒ ಅಧ್ಯಕ್ಷ ಹುದ್ದೆ ಖಾಲಿ ಬಿದ್ದಿತ್ತು. ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಅವರಿಗೆ ಈ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News