ಕಾರು ಢಿಕ್ಕಿಯಾಗಿ ಮಹಿಳೆ ಸಾವು: ಬಿಜೆಪಿ ಶಾಸಕನ ಚಾಲಕನ ಸೆರೆ
Update: 2018-08-25 21:50 IST
ಅಮರಾವತಿ, ಆ. 25: ಕಾರು ಢಿಕ್ಕಿಯಾಗಿ ಮಹಿಳೆಯ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಜಿ.ವಿ.ಎಲ್. ನರಸಿಂಹ ರಾವ್ ಅವರ ಚಾಲಕನನ್ನು ಆಂಧ್ರಪ್ರದೇಶಕ್ಕೆ ಸಂಚರಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ನರಸಿಂಹ ರಾವ್ ಅವರು ಗುಂಟೂರಿನಿಂದ ವಿಜಯವಾಡಕ್ಕೆ ಸಂಚರಿಸುತ್ತಿದ್ದ ಸಂದರ್ಭ ಕೊಲನುಕೊಂಡ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೆ ಮೃತಪಟ್ಟಿದ್ದರು. ಇನ್ನೋರ್ವ ಮಹಿಳೆ ಗಾಯಗೊಂಡಿದ್ದರು.