ಸುಷ್ಮಾ ಸ್ವರಾಜ್ ವೀಸಾ ನೀಡುವ ಹೊರತು ಬೇರೇನೂ ಮಾಡುತ್ತಿಲ್ಲ: ರಾಹುಲ್ ಗಾಂಧಿ

Update: 2018-08-26 05:58 GMT

ಹೊಸದಿಲ್ಲಿ, ಆ. 25: ನರೇಂದ್ರ ಮೋದಿ ಸರಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗ ತನ್ನ ವಾಗ್ದಾಳಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಅವರತ್ತ ತಿರುಗಿಸಿದ್ದು, ಸುಷ್ಮಾ ಸ್ವರಾಜ್ ಅವರು ಜನರ ವೀಸಾದ ಬಗ್ಗೆ ಕೆಲಸ ಮಾಡುವುದರಲ್ಲೇ ಕಾಲ ಕಳೆಯುವ ಹೊರತಾಗಿ ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.

ಲಂಡನ್‌ನಲ್ಲಿರುವ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್ (ಐಐಎಸ್‌ಎಸ್) ನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದರು. “ನೀವು ಒಂದು ವಿಷಯ ಗಮನಿಸಿದ್ದೀರಾ, ಭಾರತದ ವಿದೇಶಾಂಗ ಸಚಿವೆ ಹೆಚ್ಚಿನ ಸಮಯ ವೀಸಾಕ್ಕಾಗಿ ಕೆಲಸ ಮಾಡುವುದು ಶ್ರೇಷ್ಠ ವಿಚಾರ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಈ ಹೇಳಿಕೆಯ ಅರ್ಥ ಏನು ಎಂಬುದು ಗೊತ್ತಾಯಿತೇ ? ಇದರ ಅರ್ಥ ವಿದೇಶಾಂಗ ಸಚಿವೆಗೆ ಜನರ ವೀಸಾ ಮಾಡುವುದಕ್ಕಿಂತ ಉತ್ತಮವಾದ ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಆದುದರಿಂದ ವಿದೇಶಾಂಗ ಸಚಿವಾಲಯ ಇದರಲ್ಲಿ ಏಕಸಾಮ್ಯ ಹೊಂದಿದೆ. ವಿದೇಶಾಂಗ ಸಚಿವಾಲಯದ ಮೇಲೆ ಪ್ರಧಾನಿ ಮಂತ್ರಿ ಅವರ ಕಚೇರಿ ಏಕಸಾಮ್ಯ ಹೊಂದಿದೆ” ಎಂದಿದ್ದಾರೆ.

ಸುಷ್ಮಾ ಸ್ವರಾಜ್ ಅವರು ಸಾಕಷ್ಟು ಸಾಮರ್ಥ್ಯ ಇರುವ ಮಹಿಳೆಯಾದರೂ ನಿಜವಾಗಿ ಏನನ್ನೂ ಮಾಡುತ್ತಿಲ್ಲ. ಒಂದು ವೇಳೆ ಅವರಿಗೆ ಅಧಿಕಾರ ನೀಡಿದರೆ, ಅವರು ಏನನ್ನಾದರೂ ಮಾಡಬಹುದು. ಅವರು ಏಕಸಾಮ್ಯವನ್ನು ಬೇಧಿಸುವ ಸಾಧ್ಯತೆ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News