ಟ್ರಂಪ್ ಹೊಸ ಪ್ರೇಮ ವ್ಯವಹಾರ ಬಯಲು ಮಾಡಿದ ಮಾಜಿ ಕಾವಲುಗಾರ

Update: 2018-08-25 17:24 GMT

ವಾಶಿಂಗ್ಟನ್, ಆ.25: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮಾಜಿ ಮನೆಕೆಲಸದಾಕೆಯ ಜೊತೆ ದೈಹಿಕ ಸಂಬಂಧ ಹೊಂದಿದ್ದರು ಮತ್ತು ಅದರ ಫಲವಾಗಿ ಒಂದು ಮಗು ಕೂಡಾ ಜನಿಸಿತ್ತು ಎಂದು ಟ್ರಂಪ್ ಟವರ್‌ನ ಮಾಜಿ ಕಾವಲುಗಾರ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಟವರ್‌ನ ಮಾಜಿ ಕಾವಲುಗಾರ ಡಿನೊ ಸಾಜುದಿನ್ ಅವರನ್ನು ಅಮೆರಿಕದ ಮಾಧ್ಯಮ ಸಂಸ್ಥೆ ಕೆಲಸದಿಂದ ವಜಾ ಮಾಡಿತ್ತು ಮತ್ತು ಈ ವಿಷಯವನ್ನು ಹೊರಗೆ ಪ್ರಸ್ತಾಪಿಸದಿರುದಂತೆ ಅವರಿಗೆ ಸೂಚನೆ ನೀಡಿತ್ತು ಎಂದು ಸಾಜುದಿನ್ ಪರ ವಕೀಲ ಮಾರ್ಕ್ ಹೆಲ್ಡ್ ತಿಳಿಸಿದ್ದಾರೆ. ಅಮೆರಿಕನ್ ಮೀಡಿಯ ಇಂಕ್ ಜೊತೆಗಿನ ಒಪ್ಪಂದ ಮತ್ತು ಅವರು ಹೇಳ ಬಯಸಿದ್ದ ಕತೆಯನ್ನು ಅವರ ಮೇಲೆ ಹೊರಿಸಲಾಗಿದ್ದ ದೊಡ್ಡ ಪ್ರಮಾಣದ ದಂಡದಿಂದಾಗಿ ವಿವರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಎಎಂಐ ಸಾಜುದಿನ್ ಅವರನ್ನು ಎಲ್ಲ ಒಪ್ಪಂದಗಳಿಂದ ಬಿಡುಗಡೆಗೊಳಿಸಿದೆ.

ಹಾಗಾಗಿ ಅವರು ತಮ್ಮ ವೈಯಕ್ತಿಕ ಅನುಭವದ ಬಗ್ಗೆ ಮಾತನಾಡಲು ಸ್ವತಂತ್ರರಾಗಿದ್ದಾರೆ. ಜೊತೆಗೆ ಅಲ್ಲಿನ ಕತೆಗಳನ್ನು ಹೇಳಲೂ ಮುಕ್ತವಾಗಿದ್ದಾರೆ ಎಂದು ಮಾರ್ಕ್ ತಿಳಿಸಿದ್ದಾರೆ.

“ಡೊನಾಲ್ಡ್ ಟ್ರಂಪ್ ಮತ್ತು ಅವರ ಕೆಲಸದಾಕೆಯ ಮಧ್ಯೆ ಸಂಬಂಧ ಇದ್ದ ಬಗ್ಗೆ ನನಗರಿವಿತ್ತು ಮತ್ತು ಅವರ ಈ ಸಂಬಂಧದ ಫಲವಾಗಿ ಮಗು ಜನಿಸಿತ್ತು” ಎಂದು ಸಾಜುದಿನ್ ಅಮೆರಿಕದ ಸುದ್ದಿ ಸಂಸ್ಥೆಗೆ ಎಪ್ರಿಲ್‌ನಲ್ಲಿ ತಿಳಿಸಿದ್ದರು.

ಆದರೆ ಸಾಜುದಿನ್ ಅವರ ಈ ಹೇಳಿಕೆಯನ್ನು ತಳ್ಳಿಹಾಕಿದ ಎಎಂಐ ಅದನ್ನು ಆಧಾರರಹಿತ ಎಂದು ತಿಳಿಸಿತ್ತು. ಸಾಜುದಿನ್ ಹೇಳಿಕೆಯನ್ನು ಆಧಾರಿಸಿ ಹಲವು ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯಲ್ಲೂ ಈ ವಾದವನ್ನು ದೃಢಪಡಿಸಿಲ್ಲ ಎಂದು ಸುದ್ದಿ ಮಾಧ್ಯಮ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News