×
Ad

ಫೈನಲ್ ತಲುಪಲು ಶೂಟರ್ ಅನೀಶ್ ವಿಫಲ

Update: 2018-08-25 23:57 IST

ಜಕಾರ್ತ, ಆ.25: ಹದಿನೈದರ ಹರೆಯದ ಬಾಲಕ ಅನೀಶ್ ಭನ್ವಾಲಾ ಶನಿವಾರ ನಡೆದ ಏಶ್ಯನ್ ಗೇಮ್ಸ್‌ನ ಪುರುಷರ 25 ಮೀ.ರ್ಯಾಪಿಡ್ ಫೈಯರ್ ಪಿಸ್ತೂಲ್ ಇವೆಂಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿನ ಪ್ರದರ್ಶನ ಪುನರಾವರ್ತಿಸಲು ವಿಫಲರಾಗಿದ್ದಾರೆ.

  ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭನ್ವಾಲಾ ಐತಿಹಾಸಿಕ ಸಾಧನೆ ಮಾಡಿದ್ದರು. ಏಶ್ಯನ್ ಗೇಮ್ಸ್‌ನ ಅರ್ಹತಾ ಸುತ್ತಿನಲ್ಲಿ 576 ಅಂಕ ಗಳಿಸಿದ ಭನ್ವಾಲಾ 9ನೇ ಸ್ಥಾನ ಪಡೆಯುವುದರೊಂದಿಗೆ ಫೈನಲ್ ಸುತ್ತಿಗೆ ತೇರ್ಗಡೆಯಾಗಲು ವಿಫಲರಾದರು. ಸ್ಪರ್ಧೆಯಲ್ಲಿದ್ದ ಭಾರತದ ಇನ್ನೊರ್ವ ಶೂಟರ್ ಶಿವಂ ಶುಕ್ಲಾ 569 ಅಂಕ ಗಳಿಸಿ 11ನೇ ಸ್ಥಾನ ಪಡೆದಿದ್ದಾರೆ. ಅಗ್ರ-6 ಶೂಟರ್‌ಗಳು ಫೈನಲ್‌ಗೆ ತಲುಪಿದ್ದು ಚೀನಾದ ಝನನ್ ಯಾಯೊ ಫೈನಲ್‌ನಲ್ಲಿ ಒಟ್ಟು 34 ಅಂಕ ಗಳಿಸಿ ಚಿನ್ನ ಜಯಿಸಿದರು. ಚೀನಾದ ಇನ್ನೋರ್ವ ಶೂಟರ್ ಜುನ್‌ಮಿನ್ ಲಿನ್(33 ಅಂಕ)ಹಾಗೂ ದಕ್ಷಿಣ ಕೊರಿಯಾದ ಕಿಮ್ ಜುನ್‌ಹಾಂಗ್(29) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದಿದ್ದಾರೆ. ಭಾರತದ ಕಿರಿಯ ಶೂಟರ್‌ಗಳಾದ ಸೌರಭ್ ಚೌಧರಿ(16 ವರ್ಷ) ಹಾಗೂ ಶಾರ್ದೂಲ್ ವಿಹಾನ್(15 ವರ್ಷ)ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಿಂಚಿದ್ದ ಮನು ಭಾಕರ್ ಹಾಗೂ ಭನ್ವಾಲಾ ಏಶ್ಯನ್ ಗೇಮ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೇ ನಿರಾಸೆಗೊಳಿಸಿದ್ದಾರೆ. ಮನು ಗೇಮ್ಸ್‌ನಲ್ಲಿ ಮೂರು ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರೂ ಪದಕ ಕೈಗೆಟುಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News