ಬಿಹಾರದ ದತ್ತು ಕೇಂದ್ರದಲ್ಲಿ ಹಸಿವಿನಿಂದ ನರಳುತ್ತಿರುವ ಮಕ್ಕಳು: ವರದಿ

Update: 2018-08-26 16:34 GMT

ಹೊಸದಿಲ್ಲಿ, ಆ. 26: ಬಿಹಾರದ ದತ್ತು ಕೇಂದ್ರದಲ್ಲಿ ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ, ಅವರನ್ನು ನಿಂದಿಸಲಾಗುತ್ತದೆ ಎಂದು ಟಿಐಎಸ್‌ಎಸ್ ವರದಿ ಹೇಳಿದೆ.

0ರಿಂದ 6 ವರ್ಷಗಳ ಗುಂಪಿನ ಮನೆ ತ್ಯಜಿಸಿದ, ಶರಣಾಗತರಾದ ಹಾಗೂ ನಾಪತ್ತೆಯಾದ ಮಕ್ಕಳಿಗಾಗಿ ಬಿಹಾರ ಸರಕಾರ ಈ ವಿಶೇಷ ದತ್ತು ಸಂಸ್ಥೆ (ಎಸ್‌ಎಎ) ಆರಂಭಿಸಿದೆ. ಬಿಹಾರದಲ್ಲಿ 20 ಜಿಲ್ಲೆಗಳಲ್ಲಿ ದತ್ತು ಕೇಂದ್ರಗಳು ಇವೆ. ಆದರೆ, ಇಲ್ಲಿರುವ ಮೂರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತನಾಡಲು ಸಾಧ್ಯವಾಗುವುದೇ ಇಲ್ಲ. ತರಬೇತಿ ಹೊಂದಿದ ಸಿಬ್ಬಂದಿ ಕೊರತೆ ಇದಕ್ಕೆ ಮುಖ್ಯ ಕಾರಣ. ಈ ಸಂಸ್ಥೆಗಳಲ್ಲಿ ಶೇ. 70 ಹೆಣ್ಣು ಮಕ್ಕಳು ಎಂದು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸ್ (ಟಿಐಎಸ್‌ಎಸ್)ನ ವರದಿ ತಿಳಿಸಿದೆ.

ಅನಾಥ, ಓಡಿ ಬಂದ ಹಾಗೂ ಕುಟುಂಬದಿಂದ ತ್ಯಜಿಸಲ್ಪಟ್ಟ ಮಕ್ಕಳಿಗೆ ಈ ಕೇಂದ್ರಗಳಲ್ಲಿ ವಿವಿಧ ರೀತಿಯ ಶಿಕ್ಷೆ ನೀಡಲಾಗುತ್ತದೆ. ಮಕ್ಕಳನ್ನು ಸ್ನಾನ ಗೃಹದಲ್ಲಿ ಕೂಡಿ ಹಾಕುವುದು, ಪ್ರತ್ಯೇಕಿಸುವುದು, ನಿಂದಿಸುವುದು ಮಾಡಲಾಗುತ್ತದೆ ಎಂದು ವರದಿ ಹೇಳಿದೆ. ಈ ಮಕ್ಕಳು ತುಂಬಾ ಚಿಕ್ಕವು. ಈ ಮಕ್ಕಳನ್ನು ಸ್ನಾನಗೃಹದ ಒಳಗೆ ಕೂಡಿ ಹಾಕುವುದರಿಂದ ಅವರಿಗೆ ಮಾನಸಿಕ ಆಘಾತ ಉಂಟಾಗುವ ಸಾಧ್ಯತೆ ಇದೆ ಎಂದು ಟಿಐಎಸ್‌ಎಸ್‌ನ ಮುಹಮ್ಮದ್ ತಾರಿಖ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News