ಮಹಾತ್ಮಾ ಗಾಂಧಿ 150ನೇ ಜಯಂತಿಗೆ ರೈಲುಗಳಲ್ಲಿರಲಿದೆ ಈ ವಿಶೇಷತೆ

Update: 2018-08-26 16:40 GMT

ಹೊಸದಿಲ್ಲಿ, ಆ. 26: ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯನ್ನು ವಿಭಿನ್ನವಾಗಿ ಆಚರಿಸುವ ಯೋಜನೆಯ ಒಂದು ಭಾಗವಾಗಿ ಭಾರತೀಯ ರೈಲ್ವೆ ಎಲ್ಲ ಕೋಚ್‌ಗಳಲ್ಲಿ ಕೇಂದ್ರ ಸರಕಾರದ ಯೋಜನೆ ಸ್ವಚ್ಛ ಭಾರತದ ಲೋಗೊ ಹಾಗೂ ರಾಷ್ಟ್ರ ಧ್ವಜ ಪ್ರದರ್ಶಿಸಲಿದೆ. ಗಾಂಧಿ ಜಯಂತಿಯ ನೆನಪಿಗೆ ಸೆಪ್ಟಂಬರ್ 15ರಿಂದ ಅಕ್ಟೋಬರ್ 2ರ ವರೆಗೆ ‘ಸ್ವಚ್ಛತಾ ಪಖ್ವಾರ’ ಕಾರ್ಯಕ್ರಮ ನಡೆಯಲಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ. ಮಹಾತ್ಮಾ ಗಾಂಧಿ ಅವರಿಗೆ ವಿಶೇಷವಾಗಿ ಸಂಬಂಧಿಸಿದ 43 ರೈಲು ನಿಲ್ದಾಣಗಳನ್ನು ಗುರುತಿಸಿ ವಿಷಯಾಧಾರಿತವಾಗಿ ಪೈಂಟಿಂಗ್ ಮಾಡಲಾಗುವುದು . ಇತರ 28 ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕ ಸ್ವಚ್ಛತೆ ನಡೆಸಲಾಗುವುದು ಎಂದು ಅದು ತಿಳಿಸಿದೆ.

43 ರೈಲು ನಿಲ್ದಾಣಗಳಲ್ಲಿ ದಿಲ್ಲಿ, ಲಕ್ನೋ, ಮುಂಬೈ, ಸೂರತ್, ದಾನಾಪುರ್, ಅಸನೋಲ್, ಬೆಂಗಳೂರು, ವಡೊದರಾ ಸೇರಿವೆ. ಪ್ರಮುಖ ಸ್ಥಳಗಳಲ್ಲಿ ಪುರಿ, ಅಮೃತಸರ, ಹರಿದ್ವಾರ ಹಾಗೂ ಕುರುಕ್ಷೇತ್ರ ಸೇರಿವೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News