ಮೋದಿಯ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಅಡ್ಡಿಯಾಗಬಾರದೆಂದು ವಾಜಪೇಯಿ ನಿಧನ ವಾರ್ತೆ ತಡೆಹಿಡಿಯಲಾಗಿತ್ತೇ?

Update: 2018-08-26 16:54 GMT

ಹೊಸದಿಲ್ಲಿ, ಆ.26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಗಸ್ಟ್ 16ರಂದು ಮೃತಪಟ್ಟಿದ್ದರೇ ಅಥವಾ ಪ್ರಧಾನಿ ಮೋದಿಯ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಅಡ್ಡಿಯಾಗಬಹುದೆಂದು ನಿಧನ ವಾರ್ತೆಯನ್ನು ತಡೆಹಿಡಿಯಲಾಗಿತ್ತೇ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ರಾಜ್ಯ ಸಭಾ ಸದಸ್ಯರಾಗಿರುವ ರಾವತ್ ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕರೂ ಹೌದು. ವಾಜಪೇಯಿಯವರ ನಿಧನ ವಾರ್ತೆ ಘೋಷಿಸುವುದನ್ನು ತಡೆಹಿಡಿಯಲಾಗಿತ್ತೇ ಎಂದು ಪ್ರಶ್ನಿಸಿರುವುದಕ್ಕೆ ಅವರು ಯಾವುದೇ ಕಾರಣ ಅಥವಾ ವಿವರಣೆಯನ್ನು ನೀಡಿಲ್ಲ.

“ಜನರಿಗಿಂತ ಹೆಚ್ಚಾಗಿ ನಮ್ಮನ್ನಾಳುವವರಿಗೆ ‘ಸ್ವರಾಜ್ಯ’ದ ಬಗ್ಗೆ ತಿಳಿದಿರಬೇಕು. ಆಗಸ್ಟ್ 16ರಂದು ವಾಜಪೇಯಿ ನಿಧನರಾದರು. ಆದರೆ 12-13 ಆಗಸ್ಟ್ ನಿಂದಲೇ ಅವರ ಸ್ಥಿತಿ ಗಂಭೀರವಾಗಿತ್ತು. ರಾಷ್ಟ್ರೀಯ ಶೋಕಾಚರಣೆಯನ್ನು ತಪ್ಪಿಸಲು, ಸ್ವಾತಂತ್ರ್ಯೋತ್ಸವ ದಿನ ಧ್ವಜವನ್ನು ಕೆಳಕ್ಕಿಳಿಸುವುದನ್ನು ತಪ್ಪಿಸಲು ಹಾಗು ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣ ಮಾಡುವುದಕ್ಕಾಗಿ ವಾಜಪೇಯಿ ಆಗಸ್ಟ್ 16ರಂದು ನಮ್ಮನ್ನಗಲಿದರು (ಅಥವಾ ಅವರ ನಿಧನ ವಾರ್ತೆ ಘೋಷಿಸಲಾಯಿತು” ಎಂದು ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News