ಕುಸಿದುಬಿದ್ದ ನಾಲ್ಕು ಮಹಡಿಯ ಕಟ್ಟಡ: ನಾಲ್ವರು ಅವಶೇಷಗಳಡಿ ಸಿಲುಕಿರುವ ಶಂಕೆ
Update: 2018-08-26 22:29 IST
ಅಹ್ಮದಾಬಾದ್, ಆ.26: ಇಲ್ಲಿನ ಸರಕಾರಿ ಕಟ್ಟಡವೊಂದು ಕುಸಿದುಬಿದ್ದಿದ್ದು, ಕನಿಷ್ಠ 10 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಸಂಪೂರ್ಣವಾಗಿ ಶಿಥಿಲಗೊಂಡಿದ್ದ ನಾಲ್ಕು ಮಹಡಿಯ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡ ಕುಸಿಯುವ ಸಂದರ್ಭ ಒಳಗೆ 8ರಿಂದ 10 ಮಂದಿಯಿದ್ದರು ಎಂದು ಶಂಕಿಸಲಾಗಿದೆ. ಅವಶೇಷಗಳಡಿಯಿಂದ ಈಗಾಗಲೇ ಇಬ್ಬರನ್ನು ಹೊರತೆಗೆಯಲಾಗಿದೆ.