ಕೇರಳ ಪ್ರವಾಹ: ಚರ್ಚನ್ನು ಸ್ವಚ್ಛಗೊಳಿಸಿ ಸೌಹಾರ್ದತೆ ಮೆರೆದ ಸಿಖ್ಖರು

Update: 2018-08-26 18:17 GMT

ತಿರುವನಂತಪುರ, ಆ. 26: ನೆರೆ ಪೀಡಿತ ಕೇರಳದಲ್ಲಿ ಸಮುದಾಯ ಅಡುಗೆ ಮನೆ ಆರಂಭಿಸಿ 13 ಸಾವಿರಕ್ಕೂ ಅಧಿಕ ಜನರಿಗೆ ಊಟ ನೀಡಿದ ಖಾಲ್ಸಾ ಏಯ್ಡಾನ ಸಿಕ್ಖ್ ಸ್ವಯಂಸೇವಾ ಕಾರ್ಯಕರ್ತರಲ್ಲಿ 14 ಮಂದಿಯ ತಂಡ ಅಲೆಪ್ಪಿಯಲ್ಲಿರುವ ಚರ್ಚ್ ಅನ್ನು ಸ್ವಚ್ಛಗೊಳಿಸಿದೆ.

ನೀರಟ್ಟುಪುರಂನಲ್ಲಿರುವ ಥಲವಾಡಿ ಸಂತ ಮಾರ್‌ತೋಮಾ ಚರ್ಚ್ ಅನ್ನು ಎರಡು ದಿನಗಳ ಕಾಲ ಸ್ವಚ್ಛಗೊಳಿಸಿರುವುದರಿಂದ ಸ್ಥಳೀಯರು ರವಿವಾರದ ಪ್ರಾರ್ಥನೆ ಸಲ್ಲಿಸಲು ಅನುಕೂಲ ವಾಯಿತು.

ಚರ್ಚ್‌ನ ಆವರಣದಲ್ಲಿ ನೆರೆಯಿಂದ ಕೆಸರು ತುಂಬಿಕೊಂಡಿತ್ತು. ಸಾರ್ವಜನಿಕರು ಪ್ರವೇಶಿಸುವ ಸ್ಥಿತಿಯಲ್ಲಿ ಇರಲಿಲ್ಲ.

‘‘ಕೆಸರು ಹಾಗೂ ನೀರು ತುಂಬಿಕೊಂಡಿರುವುದರಿಂದ ಸ್ಥಳೀಯ ಕ್ರಿಶ್ಚಿಯನ್ನರಿಗೆ ರವಿವಾರದ ಪ್ರಾರ್ಥನೆ ಮಾಡುವುದು ಅಸಾಧ್ಯವಾಗಿತ್ತು. ಚರ್ಚ್ ಅನ್ನು ಸ್ವಚ್ಛಗೊಳಿಸಿ ಕೊಡುವಂತೆ ಅವರು ನಮ್ಮಲ್ಲಿ ಮನವಿ ಮಾಡಿದ್ದರು. ನಮ್ಮ ತಂಡ ಕಾರ್ಯಾಚರಣೆಗೆ ಇಳಿದು ಚರ್ಚ್ ಅನ್ನು ಸ್ವಚ್ಛಗೊಳಿಸಿತು.’’ ಎಂದು ಖಾಲ್ಸಾ ಏಯ್ಡಾನ ಏಶ್ಯಾ ಪೆಸಿಫಿಕ್ ಆಡಳಿತ ನಿರ್ವಹಣಾಧಿಕಾರಿ ಅಮರ್ ದೀಪ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News