ಮಂಜನಾಡಿ: ಅಲ್ ಮದೀನದಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

Update: 2018-08-27 13:22 GMT

ನರಿಂಗಾನ, ಆ. 27: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಮಂಚಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟವು ಅಲ್ ಮದೀನಾ ವಿದ್ಯಾಲಯ ನರಿಂಗಾನದಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ಕೆನರಾ ಬ್ಯಾಂಕ್ ನರಿಂಗಾನ ಶಾಖಾ ಪ್ರಬಂಧಕರಾದ ನವೀನ್ ಚಂದ್ರ ಅವರು ನೆರವೇರಿಸಿ ಶಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ವಹಿಸಿದ್ದರು. ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ  ಇಸ್ಮಾಯಿಲ್ ಮೀನಂಕೋಡಿ, ಸದಸ್ಯರಾದ ಮುರಳೀಧರ್ ಶೆಟ್ಟಿ ಮೋರ್ಲ, ಶಾಲಾ ಸಂಚಾಲಕ  ಅಬ್ದುಲ್ಲ ಹಾಜಿ ಮೋರ್ಲ, ಶರೀಅತ್ ಕಾಲೇಜ್ ಪ್ರಾಂಶುಪಾಲ ಮುನೀರ್ ಅಹ್ಮದ್ ಸಖಾಫಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಲೀಂ ಪೊಟ್ಟೋಳ, ಉಪಾಧ್ಯಕ್ಷ ಪಿ.ಕೆ.ಮೊಯಿದಿನ್  ಸದಸ್ಯರಾದ ಅಬೂಸಾಲಿಹ್ ಕಂಬ್ಲಕೋಡಿ, ಅಬ್ದುಲ್ ರಝ್ಝಾಕ್ ಮಾಸ್ಟರ್ ನಾವೂರು,  ನವಾಝ್ ಮಂಜನಾಡಿ ಉಪಸ್ಥಿತರಿದ್ದರು.

ಥ್ರೋಬಾಲ್ ಪಂದ್ಯಾಟದಲ್ಲಿ ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ಸರಕಾರಿ ಪ.ಪೂ. ಕಾಲೇಜು ಸಜಿಪ ಮೂಡ ಪ್ರಥಮ ಹಾಗೂ ಅಲ್ ಮದೀನ ಆಂಗ್ಲ ಮಾಧ್ಯಮ ದ್ವಿತೀಯ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಸಜೀಪ ಮೂಡ ಪ್ರಥಮ ಹಾಗೂ ಸ. ಪ್ರೌ. ಶಾಲೆ ಸುರಿಬೈಲ್ ದ್ವಿತೀಯ ಸ್ಥಾನ ಪಡೆಯಿತು.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಅಲ್ ಮದೀನ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಹಾಗೂ ದ.ಕ.ಜಿ.ಪ.ಶಾಲೆ ಸಜಿಪ ಮೂಡ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ದ.ಕ.ಜಿ.ಪ.ಮಾ.ಹಿ.ಪ್ರಾ. ಶಾಲೆ ಸಜಿಪ ಮುನ್ನೂರು ಪ್ರಥಮ ಸ್ಥಾನ ಹಾಗೂ ಸರಕಾರಿ ಉನ್ನತೀಕರಣ ಶಾಲೆ ಇರಾ ದ್ವಿತೀಯ ಸ್ಥಾನ ಗಳಿಸಿತು.

ಸಮಾರೋಪ ಸಮಾರಂಭದಲ್ಲಿ ಸಿ.ಆರ್.ಪಿ ಆಶಾ ಮೇಡಂ ವಿಜೇತರಿಗೆ ಟ್ರೋಫಿ ವಿತರಿಸಿದರು. ಆಂಗ್ಲಮಾಧ್ಯಮ ಶಾಲಾ ಪ್ರಾಂಶುಪಾಲ ಹನೀಫ್ ಮಾಸ್ಟರ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮುಹಮ್ಮದ್ ಮಾಸ್ಟರ್ ಮಲಾರ್ ಧನ್ಯವಾದವಿತ್ತರು. ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಹಾರಿಸ್ ಮಾಸ್ಟರ್ ಹಾಗೂ ದೈಹಿಕ ಶಿಕ್ಷಕ ಇಬ್ರಾಹೀಂ ಮಾಸ್ಟರ್ ಕಾಡುಮಠ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News