ಯುಪಿಸಿಎಲ್‌ನಿಂದ ಬೆಳಪು ಗ್ರಾಪಂ ಕ್ರಿಯಾಯೋಜನೆಗೆ ಅನುಮೋದನೆ

Update: 2018-08-28 16:04 GMT

ಕಾಪು, ಆ. 28: ಅದಾನಿ ಸಮೂಹದ ಯುಪಿಸಿಎಲ್ ಸಂಸ್ಥೆಯು ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಡುವ ಗ್ರಾಮಗಳಲ್ಲಿ 2018-19 ವಾರ್ಷಿಕ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಒಂದು ಕೋ.ರೂ. ಸಿಎಸ್‌ಆರ್ ಅನುದಾನದ ಕ್ರಿಯಾಯೋಜನೆಗೆ ರವಿವಾರ ಅನುಮೋದನೆ ನೀಡಿತು.

ಪಂಚಾಯತ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಬೆಳಪು ಗ್ರಾಪಂ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಯುಪಿಸಿಎಲ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರಿಗೆ 2018-19ನೇ ವಾರ್ಷಿಕ ಸಾಲಿನಲ್ಲಿ ಬೆಳಪು ಗ್ರಾಮದ ವಿವಿಧ ಸ್ಥಳಗಳಲ್ಲಿ ಒಂದು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಮನವಿಯನ್ನು ಹಸ್ತಾಂತರಿಸಿದರು. ಕಿಶೋರ್ ಆಳ್ವ ಅದಾನಿ ಯುಪಿಸಿಎಲ್‌ನ ಅನುಮೋದನೆ ಪತ್ರವನ್ನು ದೇವಿಪ್ರಸಾದ್ ಅವರಿಗೆ ಒಪ್ಪಿಸಿದರು.

‘2018-19ನೇ ಸಾಲಿನ ಸಿಎಸ್‌ಆರ್ ಕ್ರಿಯಾಯೋಜನೆ ಮನವಿಯಲ್ಲಿ ಒಂದು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಇದ್ದು, ಅದನ್ನು ಅತೀ ಶೀಘ್ರದಲ್ಲಿ ಕೈಗೆತ್ತಿಕೊಂಡು ನಿರ್ವಹಿಸಲಾಗುವುದು. 3 ವರ್ಷದ ಕ್ರಿಯಾ ಯೋಜನೆಯ ಪಟ್ಟಿಯಲ್ಲಿ ಸೂಚಿಸಲಾದ ಕಾಮಗಾರಿಗಳನ್ನು ಉತ್ತಮ ಗುಣ ಮಟ್ಟದಲ್ಲಿ ನಿರ್ವಹಿಸಿ, ಸೆಪ್ಟೆಂಬರ್ 2019ರೊಳಗೆ ಪೂರ್ಣಗೊಳಿಸಲಾಗು ವುದು. ಅದಾನಿ ವನವನ್ನು ಸ್ಥಾಪಿಸಲು ಈಗಾಗಲೇ ಬೆಳಪು ಗ್ರಾಮದಲ್ಲಿ ಸಸಿಗಳನ್ನು ನೆಡಲಾಗಿದ್ದು, 3 ವರ್ಷದ ಅವಧಿಗೆ ಅದನ್ನು ಪೋಷಿಸಲಾಗುವುದು ಎಂದು ಆಳ್ವ ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಯು.ಸಿ.ಶೇಖಬ್ಬ, ಬೆಳಪು ಗ್ರಾಪಂ ಸದಸ್ಯರಾದ ಶರತ್, ಕರುಣಾಕರ ಶೆಟ್ಟಿ, ದಿನೇಶ್ ಪೂಜಾರಿ, ನೂರಜಹಾನ್, ಉಷಾ, ವಿಜಯಲಕ್ಷ್ಮೀ, ಯುಪಿಸಿಎಲ್ ಕಂಪನಿಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ ೌಂಡೇಶನ್‌ನ ವಿನೀತ್ ಅಂಚನ್, ಅನುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News