ಮಂಗಳೂರು: ನೂತನ ನೆಕ್ಸಾ ಸಿಯಾಝ್ ಅನಾವರಣ

Update: 2018-08-28 16:13 GMT

ಮಂಗಳೂರು, ಆ. 28: ನೆಕ್ಸಾ ಸಂಸ್ಥೆಯ ನೂತನ ಮಾದರಿಯ ಕಾರು ಸಿಯಾಝ್ ಅನ್ನು ಸೋಮವಾರ ಮಂಗಳೂರಿನ ವಿಮಾನ ನಿಲ್ದಾಣದ ಸಮೀಪವಿರುವ ನೆಕ್ಸಾ ಶೋರೂನಲ್ಲಿ ಅನಾವರಣಗೊಳಿಸಲಾಯಿತು.

ಸಂಸ್ಥೆಯ ಮುಖ್ಯಸ್ಥ ಆರೂರು ಕಿಶೋರ್ ರಾವ್, ನಿರ್ದೇಶಕ ಆರೂರು ಸಂಜಯ್ ರಾವ್, ಮುಖ್ಯ ಪ್ರಧಾನ ವ್ಯವಸ್ಥಾಪಕ ನೆರೆಂಕಿ ಪಾರ್ಶ್ವಾನಾಥ್, ಸಹಾಯಕ ಪ್ರಧಾನ ವ್ಯವಸ್ಥಾಪಕ (ಮಾರಾಟ) ಚೇತನ್ ಶ್ರೀಯಾನ್ ಮತ್ತು ಗ್ರಾಹಕರಾದ ಫಾತಿಮಾ ಝೊಹರಾ ಮುಮ್ತಾಝ್ ಅವರ ಪರವಾಗಿ ಮುಹಮ್ಮದ್ ಶಫೀಕ್, ಸೋಹನ್ ಆಳ್ವಾ ಮತ್ತು ಅಡ್ರಿಯನ್ ಆಳ್ವಾ ಸೋಮವಾರ ಸಂಜೆ ನೂತನ ಕಾರನ್ನು ಅನಾವರಣಗೊಳಿಸಿದರು.

ಕರ್ನಾಟಕದಲ್ಲಿ ಮಾಂಡೋವಿ ಮೋಟರ್ಸ್ ಅಗ್ರಮಾನ್ಯ ಮಾರುತಿ ಡೀಲರ್ ಸಂಸ್ಥೆಯಾಗಿದ್ದು ಅತ್ಯಂತ ಹೆಚ್ಚು ಮಾರಾಟ, ಕಾರ್ಯಾಗಾರ ಮತ್ತು ಟ್ರೂವ್ಯಾಲ್ಯೂ ಮಳಿಗೆಗಳನ್ನು ಹೊಂದಿದೆ. ಕಳೆದ 34 ವರ್ಷಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ನಾವು 3.7 ಲಕ್ಷಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿದ್ದೇವೆ ಮತ್ತು 4.1 ಮಿಲಿಯನ್ ಕಾರುಗಳಿಗೆ ಸರ್ವಿಸ್ ಒದಗಿಸಿದ್ದೇವೆ. ಸಿಯಾಝ್, ಮುಂದಿನ ಪೀಳಿಗೆಯ ಹೈಬ್ರೀಡ್ ತಂತ್ರಜ್ಞಾನ, ಲೀಥಿಯಂ-ಇಯಾನ್ ಬ್ಯಾಟರಿ ಮತ್ತು ಕ್ರಾಂತಿಕಾರಿ ಹೊಸ ಇಂಜಿನ್ ಹೊಂದಿರುವ ಭಾರತದ ಮೊದಲ ಕಾರು ಆಗಿದೆ. ಇದರಲ್ಲಿ ನಿರ್ವಹಣೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ 1.5 ಲೀ. ಸಾಮರ್ಥ್ಯದ ಕೆ15 ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಜೊತೆಗೆ ಆಕರ್ಷಣೀಯ ಮುಖ ವಿನ್ಯಾಸ ಮತ್ತು ಸುಧಾರಿತ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸ್ಥಳಾವಕಾಶ, ವಿನ್ಯಾಸ ಮತ್ತು ಸೊಬಗಿನಿಂದಾಗಿ ಸಿಯಾಝ್, ಕಳೆದ ನಾಲ್ಕು ವರ್ಷಗಳಿಂದ ಸೆಡನ್ ವಿಭಾಗಕ್ಕೇ ಹೊಸ ಮೆರುಗು ನೀಡಿದೆ. 2014ರಲ್ಲಿ ಮಾರುಕಟ್ಟಗೆ ಪರಿಚಯಿಸಲ್ಪಟ್ಟ ಸಿಯಾಝ್‌ ಮಧ್ಯಮ ಗಾತ್ರದ ಕಾರುಗಳ ಸಾಲಿನಲ್ಲಿ ಅತ್ಯಂತ ಜನಪ್ರಿಯ ಕಾರಾಗಿ ಹೊರಹೊಮ್ಮಿತ್ತು. ಮಾರುಕಟ್ಟಗೆ ಆಗಮಿಸಿದ ಸಮಯದಿಂದ ಇಲ್ಲಿಯವರೆಗೆ 2,20,000 ಕಾರುಗಳ ಬಿಕರಿಯಾಗುವ ಮೂಲಕ ಈಗಲೂ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಸಿಯಾಝ್ ಮಾರುಕಟ್ಟೆಯಲ್ಲಿ ಗ್ರಾಹಕರ ಮನಗೆದ್ದಿದೆ. ಸಿಯಾಝ್‌ನ ಅತ್ಯಂತ ಉನ್ನತ ಶ್ರೇಣಿಯ ಆಲ್ಫಾ ಮಾದರಿಯು ಈ ಕಾರಿನ ಒಟ್ಟಾರೆ ಮಾರಾಟದಲ್ಲಿ ಶೇ.41 ಭಾಗವನ್ನು ಹೊಂದಿದೆ. ನೂತನ ಸಿಯಾಝ್, ಇಂದಿನ ಬದಲಾಗುತ್ತಿರುವ ಗ್ರಾಹಕರ ಆಶಯಕ್ಕೆ ತಕ್ಕಂತೆ ವಿನೂತನ ಬದಲಾವಣೆಗಳನ್ನು ಹೊಂದಿರಲಿದೆ ಎಂಬ ವಿಶ್ವಾಸವನ್ನು ಸಂಸ್ಥೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News