ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಕಾದಂಬರಿಗಳ ಆಹ್ವಾನ

Update: 2018-08-28 16:14 GMT

ಮಂಗಳೂರು, ಆ.28: ಕಳೆದ 25 ವರ್ಷಗಳ ಕನ್ನಡ ಸಾಹಿತ್ಯ ಕೃತಿಗಳಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ನೀಡುತ್ತಾ ಬಂದಿರುವ ಸಂಸ್ಥೆ ತನ್ನ 26ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ 2016-17-18ರ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳನ್ನು ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಲಾಗಿದೆ.

ಕಾದಂಬರಿ, ಜೀವನ ಚರಿತ್ರೆ, ವ್ಯಕ್ತಿ ಚರಿತ್ರೆ, ಅಭಿನಂದನಾ ಗ್ರಂಥ, ಸಂಶೋಧನೆ, ಇತಿಹಾಸ, ವಿಮರ್ಶೆ, ಕಥಾ ಸಂಕಲನ, ಅಂಕಣ ಬರಹ, ಅನುವಾದ ಸಾಹಿತ್ಯದ ಪ್ರಕಾರಗಳಿಗೆ ಈ ಸಾಹಿತ್ಯ ಸ್ಪರ್ಧೆ ಮೀಸಲಾಗಿದೆ.

ಆಯ್ಕೆಯಾದ 10 ಕೃತಿಗಳಿಗೆ ತಲಾ ಐದು ಸಾವಿರ ರೂ. ಬಹುಮಾನದೊಂದಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಫಲಿತಾಂಶ ನವೆಂಬರ್ ತಿಂಗಳಲ್ಲಿ ಪ್ರಕಟಗೊಳ್ಳಲಿದೆ. 2018ರ ಡಿಸೆಂಬರ್ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕೃತಿಗಳ ಮೂರು ಪ್ರತಿ, ಲೇಖಕರ ಎರಡು ಫೋಟೊ ಹಾಗೂ ಬಯೋಡಾಟಾದೊಂದಿಗೆ ಸೆ.15ರೊಳಗೆ ಕಳುಹಿಸಬೇಕು

ರಮೇಶ್ ಸುರ್ವೆ, ಅಧ್ಯಕ್ಷರು, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಪ್ರಸ್ಟ್, 468/ಸುರ್ವೆ, 13ನೇ ಮೇನ್, 3ನೇ ಹಂತ, ಮಂಜುನಾಥನಗರ ಬೆಂಗಳೂರು-560010ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9845307327ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News