ಆರೋಗ್ಯ ಕರ್ನಾಟಕ ಯೋಜನೆ: ಕೆಎಂಸಿ ಮಣಿಪಾಲದಲ್ಲಿ ಊರ್ಜಿತ

Update: 2018-08-28 16:57 GMT

ಉಡುಪಿ, ಆ.28: ಆರೋಗ್ಯ ಕರ್ನಾಟಕ ಯೋಜನೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಈಗಲೂ ಊರ್ಜಿತದಲ್ಲಿದ್ದು, ಯೋಜನೆಯಡಿ ಚಿಕಿತ್ಸೆಗೆ ಬರುವ ಎಲ್ಲಾ ರೋಗಿಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೆಲ ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧಾರರಹಿತವಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಕೆಎಂಸಿ ಆಸ್ಪತ್ರೆ ತನ್ನೆಲ್ಲಾ ಕರಾರಿನ ಬದ್ಧತೆಯನ್ನು ಯಾವತ್ತೂ ಗೌರವಿಸುತ್ತದೆ. ಕೆಎಂಸಿ ಆಸ್ಪತ್ರೆಯಲ್ಲಿ ಸರಕಾರದ ಯಾವುದೇ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ. ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನವನ್ನು ಸುಮಾರು 443 ರೋಗಿಗಳು ಈಗ ಕೆಎಂಸಿಯಲ್ಲಿ ಪಡೆದುಕೊಳ್ಳುತಿದ್ದಾರೆ.

ಸರಕಾರದೊಂದಿಗೆ ಸೇರಿ ಕೆಲಸ ಮಾಡುವುದಕ್ಕೆ ನಾವು ಬದ್ಧರಾಗಿದ್ದು, ಸರಕಾರದ ಎಲ್ಲಾ ಯೋಜನೆಗಳನ್ನು ನಾವು ಬೆಂಬಲಿಸುತಿದ್ದೇವೆ ಎಂದು ಡಾ.ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News