ಮಂಗಳೂರು: ಶೈಕ್ಷಣಿಕ ಸೇವೆಗೆ ‘ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್’ ಸಾರಥ್ಯ

Update: 2018-08-29 13:01 GMT

ಮಂಗಳೂರು, ಆ.29: ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಸೇವೆಗಳನ್ನು ನೀಡುತ್ತಿರುವ ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ಇದೀಗ ಉನ್ನತ ಮಟ್ಟದ ನಾಯಕತ್ವದೊಂದಿಗೆ ದ.ಕ. ಜಿಲ್ಲಾ ಸಮಿತಿ ಅಸಿತ್ವಕ್ಕೆ ಬಂದಿದೆ. ಇತ್ತೀಚೆಗೆ ಬಿ.ಸಿ.ರೋಡ್ ರಿಕ್ಷಾ ಭವನದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಮಿತಿಯನ್ನು ರಚಿಸಲಾಯಿತು.

ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ, ಜಿಲ್ಲಾ ಸಂಚಾಲಕ ಕೆ.ಎಂ.ಇಕ್ಬಾಲ್ ಬಾಳಿಲ ಅಧ್ಯಕ್ಷತೆಯಲ್ಲಿ ಕೇಂದ್ರ ಸಮಿತಿ ಕಾರ್ಯದರ್ಶಿ ಸೈಯದ್ ಹಮ್ದುಲ್ಲಾ ತಂಙಳ್ ಕಾಸರಗೋಡು ನೇತೃತ್ವದಲ್ಲಿ ಸಮಿತಿಯನ್ನು ಘೋಷಿಸಲಾಯಿತು.

ಚೇರ್‌ ಮ್ಯಾನ್ ಆಗಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಅವರನ್ನು ಆಯ್ಕೆ ಮಾಡಲಾಯಿತು. ವೈಸ್ ಚೇರ್‌ ಮ್ಯಾನ್ ಆಗಿ ಆರಿಫ್ ಕೈಕಂಬ, ಅಬ್ದುಲ್ ಸಮದ್, ತೌಸಿಫ್ ಪಾಂಡವರಕಲ್ಲು ಅವರನ್ನು ಆಯ್ಕೆ ಮಾಡಲಾಯಿತು.

ವೈಸ್ ಕನ್ವಿನರ್‌ಆಗಿ ಉಮರ್ ಈಶ್ವರ ಮಂಗಲ, ಅಬ್ದುಲ್ ರಹಿಮಾನ್ ಕಡಬ, ಅಬ್ದುಲ್ ನಬ್ಸೀರಾ, ಕೋಶಾಧಿಕಾರಿಯಾಗಿ ಹಾಶಿಂ ತೋಡಾರ್, ನಿರ್ದೇಶಕರಾಗಿ ರಿಯಾಝ್ ರಹ್ಮಾನಿ ಗೂಡಿನಬಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮಾಸ್ಟರ್, ಮುಹಮ್ಮದ್ ಬಶೀರ್, ಝೈನುಲ್ ಆಬಿದೀನ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಕಿನ್ಯಾ ದುಆಗೈದರು. ಸೈಯದ್ ಹಮ್ದುಲ್ಲಾ ತಂಙಳ್ ಟ್ರೆಂಡ್‌ನ ಮುಂದಿನ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ, ವರ್ಕಿಂಗ್ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ಲಾ ಖಾದರ್ ಬಂಟ್ವಾಳ ಉಪಸ್ಥಿತರಿದ್ದರು. ರಿಯಾಝ್ ರಹ್ಮಾನಿ ಕಾರ್ಯಕ್ರಮ ನಿರೂಪಿಸಿದರು.

ಅಬ್ದುಲ್ ಹಮೀದ್ ಕಣ್ಣೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News