ಕರ್ನಾಟಕದಿಂದ ಎಂಎಸ್‌ಪಿಯಲ್ಲಿ 23,250 ಟನ್ ಹೆಸರುಕಾಳು ಖರೀದಿಸಲು ಕೇಂದ್ರದ ನಿರ್ಧಾರ

Update: 2018-08-30 14:44 GMT

ಹೊಸದಿಲ್ಲಿ,ಆ.30: ಕುಸಿಯುತ್ತಿರುವ ಬೆಲೆಗಳಿಂದ ರೈತರನ್ನು ರಕ್ಷಿಸಲು ಕೇಂದ್ರವು ಬೆಲೆ ಬೆಂಬಲ ಯೋಜನೆಯಡಿ ಕರ್ನಾಟಕದಿಂದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಲ್ಲಿ 23,250 ಟನ್ ಹೆಸರುಕಾಳನ್ನು ಖರೀದಿಸಲಿದೆ ಎಂಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ಗುರುವಾರ ಇಲ್ಲಿ ತಿಳಿಸಿದರು.

ಹೆಸರು ಕಾಳಿನ ಬೆಲೆಗಳು 2018-19ರ ಬೆಳೆಸಾಲಿಗಾಗಿ ನಿಗದಿಗೊಳಿಸಲಾಗಿರುವ ಪ್ರತಿ ಕ್ವಿಂಟಲ್‌ಗೆ 6,975 ರೂ.ಗಿಂತ ಕೆಳಗೆ ಕುಸಿದಿರುವುದರಿಂದ ಕರ್ನಾಟಕದಲ್ಲಿಯ ಬೇಳೆಕಾಳುಗಳ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

ಕೃಷಿ ಇಲಾಖೆಯು ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದು, ಒಪ್ಪಿಗೆ ದಿನಾಂಕದಿಂದ 90 ದಿನಗಳ ಅವಧಿಯಲ್ಲಿ ಕೇಂದ್ರದ ನೋಡಲ್ ಸಂಸ್ಥೆಗಳು ರಾಜ್ಯಮಟ್ಟದ ಸಂಸ್ಥೆಗಳೊಂದಿಗೆ ಸೇರಿ ಈ ಖರೀದಿಯನ್ನು ಮಾಡಲಿವೆ ಎಂದು ತಿಳಿಸಿದ ಅಧಿಕಾರಿ,ರಾಜ್ಯವು ಕನಿಷ್ಠ 15 ದಿನಗಳ ಆವರ್ತ ನಿಧಿಯನ್ನು ಒದಗಿಸಬೇಕಾಗುತ್ತದೆ ಮತ್ತು ಖರೀದಿಯ ಮೂರು ದಿನಗಳಲ್ಲಿ ರೈತರ ಆಧಾರ್ ಜೋಡಣೆಗೊಂಡಿರುವ ಬ್ಯಾಂಕುಗಳಿಗೆ ಹಣಪಾವತಿಯಾಗುವಂತೆ ನೊಡಿಕೊಳ್ಳಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News